Home » ಚಿಣ್ಣರ ನಟ್ಟಿ ಕಾರ್ಯಕ್ರಮ
 

ಚಿಣ್ಣರ ನಟ್ಟಿ ಕಾರ್ಯಕ್ರಮ

by Kundapur Xpress
Spread the love

ಉಡುಪಿ : ವಿಠೋಭ ಭಜನಾ ಮಂದಿರದ ಬಳಿ   ಚಿಣ್ಣರ ನಟ್ಟಿ ಕಾರ್ಯಕ್ರಮ ಆಯೋಜಿಸಲಾಯಿತು ಕೇದಾರೋತ್ಥಾನ ಟ್ರಸ್ಟ್ (ರಿ.) ಉಡುಪಿಯಲ್ಲಿ ಹಮ್ಮಿಕೊಂಡ “ಹಡಿಲು ಭೂಮಿ ಕೃಷಿ ಅಂದೋಲನ”ದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಟೀಮ್ ನೇಶನ್ ಫಸ್ಟ್ ತಂಡ ಉಡುಪಿ ಇದರಿಂದ ಪ್ರೇರಣೆ ಪಡೆದು ಈ ಬಾರಿ 6 ಎಕರೆ ಪ್ರದೇಶದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಭತ್ತದ ಕೃಷಿ ಮಾಡುತ್ತಿದ್ದು, ಚಿಣ್ಣರ ನಟ್ಟಿ ಮೂಲಕ ನಾಟಿ ಕಾರ್ಯ ಆರಂಭಿಸಿದರು. 200 ಕ್ಕೂ ಅಧಿಕ ಮಂದಿ ಯುವಕ ಯುವತಿಯರು ಇದರಲ್ಲಿ ಪಾಲ್ಗೊಂಡಿದ್ದರು.

ಈ ಭತ್ತ ನಾಟಿ ಕಾರ್ಯದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಭಾಗವಹಿಸಿದರು. ಹಡಿಲು ಬಿಟ್ಟಿರುವ ಫಲವತ್ತಾದ ಕೃಷಿ ಭೂಮಿಯಲ್ಲಿ ಮತ್ತೆ ಕೃಷಿ ಕಾಯಕವನ್ನು ಮಾಡುತ್ತಿರುವುದು ಇದು ದೇಶ ಸೇವೆ. ಇದರಿಂದ ನಮ್ಮ ಪರಿಸರ ಉಳಿಯುತ್ತದೆ. ಇಂತಹ ಕ್ರಾಂತಿಕಾರಿ ದೇಶಕ್ಕೆ ಮಾದರಿಯಾಗಿರುವ ಕಾರ್ಯಕ್ರಮವನ್ನು ಉಡುಪಿಯಲ್ಲಿ ಆರಂಭಿಸಿದ ರಘುಪತಿ ಭಟ್ ಅವರು ಎಲ್ಲರಿಗೂ ಮಾದರಿ ಎನಿಸಿದ್ದಾರೆ. ಇಂದು ಆಸಕ್ತಿಯಿಂದ ಅದನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಟೀಮ್ ನೇಷನ್ ಫಸ್ಟ್ ಉಡುಪಿ ತಂಡದ ಎಲ್ಲ ಸದಸ್ಯರು ಅಭಿನಂದನೆಗೆ ಅರ್ಹರು ಎಂದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಯುವಕ ಯುವತಿಯರನ್ನು ಅಭಿನಂದಿಸಿದರು. ಈ ಸಂದರ್ಭ ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಅವರನ್ನು ಸನ್ಮಾನಿಸಲಾಯಿತು.

   

Related Articles

error: Content is protected !!