Home » ರಾಷ್ಟ್ರೀಯ ಮಟ್ಟದ ಟಿ20 ಕ್ರಿಕೆಟ್ ನಲ್ಲಿ ಸಾಧನೆ
 

ರಾಷ್ಟ್ರೀಯ ಮಟ್ಟದ ಟಿ20 ಕ್ರಿಕೆಟ್ ನಲ್ಲಿ ಸಾಧನೆ

ಮೂಡ್ಲಕಟ್ಟೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆ

by Kundapur Xpress
Spread the love

 ಮೂಡ್ಲಕಟ್ಟೆ : ಇಂಡಿಯನ್ ಡೆಫ್ ಕ್ರಿಕೆಟ್ ಅಸೋಸಿಯೇಷನ್’ ಆಯೋಜನೆಯ ಅಡಿಯಲ್ಲಿ ಆಂಧ್ರಪ್ರದೇಶದ ಅನಂತಪುರದಲ್ಲಿ ನವೆಂಬರ್ 25 ರಿಂದ 28 ರವರೆಗೆ ನಡೆದ ರಾಷ್ಟ್ರೀಯ ಮಟ್ಟದ 19 ವರ್ಷದೊಳಗಿನ ಟಿ20 ಕ್ರಿಕೆಟ್ ಪಂದ್ಯಕೂಟದಲ್ಲಿ ಐಎಂಜೆ ಪದವಿ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿ ಸನಿತ್ ಶೆಟ್ಟಿ ಒಡಿಶಾ ತಂಡವನ್ನು ಪ್ರತಿನಿಧಿಸಿ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪಂದ್ಯಕೂಟದ ಫೈನಲ್ ನಲ್ಲಿ ಒಡಿಶಾ ತಂಡ ಹರಿಯಾಣ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಅತ್ಯುತ್ತಮ ಪ್ರದರ್ಶನ ತೋರಿದ ಸನಿತ್ ಶೆಟ್ಟಿ ‘ಸರಣಿ ಶ್ರೇಷ್ಠ’, ಫೈನಲ್ ನಲ್ಲಿ ‘ಪಂದ್ಯ ಶ್ರೇಷ್ಠ’ ಹಾಗೂ ‘ಉತ್ತಮ ದಾಂಡಿಗ’ ಪ್ರಶಸ್ತಿಯನ್ನು ಗಳಿಸಿದರು.
ವಿದ್ಯಾರ್ಥಿಯು ಕಳೆದ ಬಾರಿಯೂ ರಾಷ್ಟ್ರೀಯ ಮಟ್ಟದ ‘ಟಿ – 20’ ಕ್ರಿಕೆಟ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಅತ್ಯುತ್ತಮ ಪ್ರದರ್ಶನ ತೋರಿದ್ದರು.
ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿರುತ್ತಾರೆ.

 

Related Articles

error: Content is protected !!