ಕುಂದಾಪುರ : ಸಮೀಪದ ತಲ್ಲೂರಿನ ಪ್ರವಾಸಿ ಹೊಟೇಲ್ ಎದುರುಗಡೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂದಾಪುರದ ಕಡೆಗೆ ಬರುತ್ತಿದ ಬಸ್ಸಿಗೆ ಹಿಂದಿನಿಂದ ಲಾರಿಯೊಂದು ಢಿಕ್ಕಿ ಹೊಡೆಯಿತು ಢಿಕ್ಕಿಯ ರಭಸಕ್ಕೆ ಬಸ್ಸಿನಲ್ಲಿದ್ದ 15 ಕ್ಕೂ ಮಿಕ್ಕಿ ಪ್ರಯಾಣಿಕರಿಗೆ ಗಾಯಗಳಾಗಿದ್ದು ಹೆಚ್ಚಿನವರು ಶಾಲಾ ವಿದ್ಯಾರ್ಥಿಗಳಾಗಿದ್ದಾರೆ ತಕ್ಷಣವೇ ಅವರನ್ನು ವಿವಿಧ ಅಂಬುಲೆನ್ಸ್‌ಗಳ ಮೂಲಕ ಕುಂದಾಪುರ ನಗರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ
ಉಪ್ಪುಂದದಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಎ ಕೆ ಎಂ ಎಸ್ ಬಸ್ ತಲ್ಲೂರು ಪ್ರವಾಸಿ ಹೊಟೇಲ್ ಎದುರುಗಡೆಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಮುಂದಕ್ಕೆ ಚಲಿಸುತ್ತಿರುವಾಗ ತ್ರಾಸಿ ಕಡೆಯಿಂದ ಆಗಮಿಸಿದ ಗೂಡ್ಸ್ ಲಾರಿಯು ಬಸ್ಸಿನ ಹಿಂಭಾಗಕ್ಕೆ ರಭಸದಿಂದ ಢಿಕ್ಕಿ ಹೊಡೆದು ಬಸ್ಸನ್ನು 100 ಮೀಟರ್ ಮುಂದಕ್ಕೆ ದೂಡಿಕೊಂಡು ಬಂದಿದ್ದ ಪರಿಣಾಮ ಬಸ್ಸಿನ ಹಿಂಭಾಗ ಸಂಪೂರ್ಣ ಗುಜ್ಜು ನುಜ್ಜಾಗಿದ್ದು ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ಹೆಚ್ಚಿನ ವಿದ್ಯಾರ್ಥಿಗಳಿಗೆ ಗಾಯವಾಗಿದೆ
ತಕ್ಷಣವೇ ಅಂಬುಲೆನ್ಸ್ ಮೂಲಕ ಕುಂದಾಪುರ ನಗರದ ಆದರ್ಶ ಆಸ್ಪತ್ರೆ ಹಾಗೂ ಚಿನ್ಮಯಿ ಆಸ್ಪತ್ರೆಗಳಿಗೆ ವಿದ್ಯಾರ್ಥಿಗಳನ್ನು ಸಾಗಿಸಲಾಯಿತು ಕೆಲವರು ಐ ಸಿ ಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಓರ್ವ ವಿದ್ಯಾರ್ಥಿಗೆ ಕಾಲಿನ ಮೂಳೆ ಮುರಿದಿದ್ದು ಆತನಿಗೆ ಚಿನ್ಮಯಿಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ ಎಂ ಸಿ ಗೆ ಸಾಗಿಸಲಾಯಿತು ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನವುಮಾಡಿಕೊಟ್ಟಿದ್ದು ಚಾಲಕನ್ನು ಬಂಧಿಸಿದ್ದಾರೆ

ಅಪಘಾತ ಸ್ಥಳದಲ್ಲಿದ್ದ ಮಾಣಿಮನೆ ರಮೇಶ್ ಎಂಬವರು ತಕ್ಷಣವೇ ಪೊಲೀಸ್ ಅಂಬುಲೆನ್ಸ್ ಗಳಿಗೆ ಮಾಹಿತಿ ನೀಡಿ ರಿಕ್ಷಾಗಳನ್ನು ಕರೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು

