Home » ಕೋಟ ಮೂರ್ ಕೈ ಬಳಿ ರಸ್ತೆ ಕಂದಕಕ್ಕೆ ಬಿದ್ದ ಟಿಟಿ ವಾಹನ, ಹಲವರಿಗೆ ಗಾಯ
 

ಕೋಟ ಮೂರ್ ಕೈ ಬಳಿ ರಸ್ತೆ ಕಂದಕಕ್ಕೆ ಬಿದ್ದ ಟಿಟಿ ವಾಹನ, ಹಲವರಿಗೆ ಗಾಯ

by Kundapur Xpress
Spread the love

ಕೋಟ: ಇಲ್ಲಿನ ಕೋಟದ ಹೈಸ್ಕೂಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇರಳದಿಂದ ಪ್ರವಾಸಕ್ಕೆ ಹೊರಟ್ಟಿದ್ದ ಟಿಟಿ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಬಿದ್ದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಸುಮಾರು ಹತ್ತು ಜನ ಪ್ರಯಾಣಿಕರಿದ್ದ ಟಿಟಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಹೊಡೆದು ರಾಷ್ಟ್ರೀಯ ಹೆದ್ದಾರಿ ಪಕ್ಕದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಇಂದಿರಾ ಲ್ಯಾಬ್ ಸಮೀಪದ ಕಂದಕಕ್ಕೆ ಉರುಳಿದೆ.

ಅಪಘಾತದಲ್ಲಿ 10 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಕೋಟ ಎಸ್ಸೈ ಸುಧಾ ಪ್ರಭು ಸಿಬ್ಬಂದಿಯೊಡನೆ ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.

 

Related Articles

error: Content is protected !!