Home ಕರಾವಳಿ ಸುದ್ದಿಮಾದಕ ವಸ್ತು ಸೇವನೆ : ಯುವಕನ ವಿರುದ್ಧ ಉರ್ವ ಪೊಲೀಸರು ಕಾನೂನು ಕ್ರಮ

ಮಾದಕ ವಸ್ತು ಸೇವನೆ : ಯುವಕನ ವಿರುದ್ಧ ಉರ್ವ ಪೊಲೀಸರು ಕಾನೂನು ಕ್ರಮ

Drug Consumption: Urwa Police Take Legal Action Against Youth

by Kundapur Xpress

ಮಂಗಳೂರು: ನಗರದ ಕುಂಟಿಕಾನ ಫ್ಲೈಓವರ್ ಬಳಿ ಮಾದಕ ವಸ್ತು ಸೇವಿಸಿರುವ ಆರೋಪದ ಮೇಲೆ ಕೇರಳ ಮೂಲದ ಯುವಕನ ವಿರುದ್ಧ ಉರ್ವ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ಸಂಜೆ 6 ಗಂಟೆಯಿಂದ ಪೊಲೀಸರು ಸಿಬ್ಬಂದಿಯೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ವೇಳೆ ಸಂಜೆ 6.30ರ ಸುಮಾರಿಗೆ ಕುಂಟಿಕಾನ ಫ್ಲೈಓವರ್ ಬಳಿ ಯುವಕನೊಬ್ಬ ಸಿಗರೇಟ್ ಸೇದುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ಯುವಕನನ್ನು ವಿಚಾರಿಸಿದಾಗ ಮೊಹಮ್ಮದ್ ನಜಾದ್ ಟಿ.ಪಿ. (20) ಎಂದು ತಿಳಿದುಬಂದಿದೆ. ಈತನ ಮಾತು ತೊದಲುತ್ತಿದ್ದು, ಮಾದಕ ವಸ್ತು ಸೇವಿಸಿರುವ ಅಮಲಿನಲ್ಲಿರುವಂತೆ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಯುವಕ ನಿಷೇಧಿತ ಮಾದಕ ವಸ್ತು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಆತನನ್ನು ವಶಕ್ಕೆ ಪಡೆದು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ Tetrahydrocannabinol (Marijuana) ಸೇವಿಸಿರುವುದು ದೃಢಪಟ್ಟಿದೆ ಎಂದು ವೈದ್ಯಾಧಿಕಾರಿಗಳು ಪ್ರಮಾಣಪತ್ರ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Related Articles

Leave a Comment

This site uses Akismet to reduce spam. Learn how your comment data is processed.