Home ಕರಾವಳಿ ಸುದ್ದಿಬೈಂದೂರು : ಸೌಪರ್ಣಿಕಾ ನದಿ ಬಳಿ ಇಬ್ಬರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬೈಂದೂರು : ಸೌಪರ್ಣಿಕಾ ನದಿ ಬಳಿ ಇಬ್ಬರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Byndoor: Two Found Dead Hanging Near Souparnika River

by Kundapur Xpress

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್ (ಹಾಲ್ಕಲ್ ಸಮೀಪ) ಸೌಪರ್ಣಿಕಾ ನದಿ ಬಳಿ ಇಬ್ಬರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಮೃತರನ್ನು ಚಾರ್ಸಲ್ ನಿವಾಸಿ ವಿಠ್ಠಲ ನಾಯ್ಕ್ (36) ಮತ್ತು ಹೊಸೂರು ಗ್ರಾಮದ ದರುಕೋಡು ನಿವಾಸಿ ಭವ್ಯಾ ಅಲಿಯಾಸ್ ನಿಶ್ಮಿತಾ (33) ಎಂದು ಗುರುತಿಸಲಾಗಿದೆ.

ಏನಿದು ಹಿನ್ನೆಲೆ?:
ಕೆಲ ದಿನಗಳ ಹಿಂದೆ ವಿಠ್ಠಲ ನಾಯ್ಕ್ ತನ್ನ ಪತ್ನಿಗೆ ವಿಷಪ್ರಾಶನ ಮಾಡಿ ಕೊಲೆ ಯತ್ನ ನಡೆಸಿದ್ದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಸೆ.11 ರಂದು ದೂರು ದಾಖಲಾಗಿತ್ತು.

ಆಟೋ ಚಾಲಕನಾಗಿದ್ದ ವಿಠ್ಠಲ ನಾಯ್ಕ್ ಪತ್ನಿ ಮತ್ತು ಮಗುವಿನೊಂದಿಗೆ ವಾಸವಿದ್ದ. ಈ ನಡುವೆ ಟೈಲರ್ ಕೆಲಸ ಮಾಡುತ್ತಿದ್ದ ಭವ್ಯಾಳೊಂದಿಗೆ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಇದಕ್ಕೆ ಅಡ್ಡಿಯಾಗಿದ್ದ ಪತ್ನಿಯನ್ನು ಹತ್ಯೆ ಮಾಡುವ ಸಂಚು ರೂಪಿಸಿ, ಭವ್ಯಾಳನ್ನು ನರ್ಸ್ ಎಂದು ಪರಿಚಯಿಸಿ ಇಂಜೆಕ್ಷನ್ ನೀಡಲಾಗಿತ್ತು ಎನ್ನಲಾಗಿದೆ. ಇದರಿಂದ ವಿಠ್ಠಲನ ಪತ್ನಿ ಅಸ್ವಸ್ಥಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಪತ್ನಿ ಚೇತರಿಸಿಕೊಳ್ಳುತ್ತಿದ್ದಂತೆ ಇಬ್ಬರೂ ಮೈಸೂರಿಗೆ ಪರಾರಿಯಾಗಿದ್ದರು ಎಂದು ಹೇಳಲಾಗಿದೆ.

ನಂತರ ಕೊಲ್ಲೂರು ಭಾಗದಲ್ಲಿ ಕಾಣಿಸಿಕೊಂಡು ನಾಪತ್ತೆಯಾಗಿದ್ದ ಈ ಜೋಡಿ, ಇಂದು ಸೌಪರ್ಣಿಕಾ ನದಿ ಬದಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿದ್ದು, ಸುಮಾರು 15 ದಿನಗಳ ಹಿಂದೆಯೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸೋಕೋ ತಂಡದಿಂದ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ

Related Articles

Leave a Comment

This site uses Akismet to reduce spam. Learn how your comment data is processed.