Home ಕರಾವಳಿ ಸುದ್ದಿಕುಂದಾಪುರ : ನಿವೃತ್ತ ಪೊಲೀಸ್ ಉಪನಿರೀಕ್ಷಕ ವಿಶ್ವನಾಥ ಶೆಟ್ಟಿ ನಿಧನ

ಕುಂದಾಪುರ : ನಿವೃತ್ತ ಪೊಲೀಸ್ ಉಪನಿರೀಕ್ಷಕ ವಿಶ್ವನಾಥ ಶೆಟ್ಟಿ ನಿಧನ

Kundapura: Retired Sub-Inspector of Police Vishwanath Shetty passes away

by Kundapur Xpress

ಕುಂದಾಪುರ: ಕೋಣಿ ನಿವಾಸಿ ನಿವೃತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕ ವಿಶ್ವನಾಥ ಶೆಟ್ಟಿ (76) ಹೃದಯಾಘಾತದಿಂದ ಸೆಪ್ಟೆಂಬರ್ 30ರಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರ ಪತ್ನಿ, ಇಬ್ಬರ ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ವಿಶ್ವನಾಥ ಶೆಟ್ಟಿ ಅವರು ಕುಂದಾಪುರ ಪೊಲೀಸ್ ಲೈನ್ ರಕೇಶ್ವರಿ ದೇವಸ್ಥಾನದ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದರು. ಸುಮಾರು 40 ವರ್ಷಗಳಿಂದ ದೇವಸ್ಥಾನದ ಆಡಳಿತ ಮೊಕೇಸರರಾಗಿದ್ದರು ಮತ್ತು ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದರು

ಮೃತರ ಪಾರ್ಥಿವ ಶರೀರವನ್ನು ಅಕ್ಟೋಬರ್ 1ರ ಬೆಳಿಗ್ಗೆ 11:30ವರೆಗೆ ಕುಂದಾಪುರದ ಕೋಣಿ ಸ್ವಗೃಹದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ತದನಂತರ ಅವರ ಹುಟ್ಟೂರಾದ ಕಾವ್ರಾಡಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲ ತಿಳಿಸಿದೆ.

Related Articles

Leave a Comment

This site uses Akismet to reduce spam. Learn how your comment data is processed.