ಕುಂದಾಪುರ : ನಗರದ ಭಂಡಾರ್ಕರ್ಸ್ ಕಾಲೇಜಿನ ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ತರಗತಿಗಳನ್ನು ಬಹಿಷ್ಕರಿಸಿ ಬೃಹತ್ ಪ್ರತಿಭಟನೆ ನಡೆಸಿದರು ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡು ಕಾಲೇಜಿನ ಆಡಳಿತ ಮಂಡಳಿಯ ವಿರುದ್ದ ಆಕ್ರೋಶ ಹೊರ ಹಾಕಿದರು
ಭಂಡಾರ್ಕರ್ಸ್ ಕಾಲೇಜಿನ ಹಿಂದಿನ ನಿಯಮದಂತೆ ವಿದ್ಯಾರ್ಥಿಗಳಿಗೆ ತರಗತಿಗಳು ಇಲ್ಲದಿದ್ದಲ್ಲಿ ಅವರಿಗೆ ಕಾಲೇಜಿನಿಂದ ಹೊರ ಹೋಗಲು ಅವಕಾಶದೊಂದಿಗೆ ಕ್ಯಾಂಟೀನ್ ಹಾಗೂ ಇನ್ನಿತರ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಲೈಬ್ರೇರಿಯಲ್ಲಿ ಓದಲು ಅವಕಾಶವಿದ್ದು ತುರ್ತು ಕೆಲಸದ ನಿಮಿತ್ತ ಕಾಲೇಜಿನ ಹೊರಗಡೆ ಹೋಗಬಹುದಾಗಿತ್ತು
ಕುಂದಾಪುರ ತಾಲೋಕು ಎನ್ ಎಸ್ ಯು ಐ ಘಟಕವು ಪ್ರತಿಭಟನೆಯನ್ನು ಆಯೋಜಿಸಿದ್ದು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತನ್ನು ಎರ್ಪಡಿಸಲಾಗಿತ್ತು
ಕಾಲೇಜಿನ ಕ್ಯಾಂಟಿನ್ ಲಾಭಿ
ಇತ್ತೀಚಿನ ವರ್ಷಗಳಲ್ಲಿ ಭಂಡಾರ್ಕರ್ಸ ಕಾಲೇಜಿನ ಕ್ಯಾಂಟೀನಿಗೆ ಟೆಂಡರ್ ಕರೆಯಲಾಗಿದ್ದು ತಿಂಡಿ ಮತ್ತು ಊಟ ತರದ ವಿದ್ಯಾರ್ಥಿಗಳು ಕಾಲೇಜಿನ ಕ್ಯಾಂಟಿನಿನಲ್ಲಿಯೇ ತೆರಳುವ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದು ಈ ಹಿಂದೆ ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಕಾಲೇಜಿನ ಹೊರಗಡೆ ಹೋಗಿ ಊಟ ತಿಂಡಿ ತಿನ್ನುತ್ತಿದ್ದರು ಕಾಲೇಜ್ ಸಮೀಪದ ಕೆಲವು ಹೊಟೇಲ್ ಗಳು ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಆಹಾರ ನೀಡುತಿತ್ತು ಇದೀಗ ಕಾಲೇಜಿನ ಕ್ಯಾಂಟೀನವರು ಪ್ರತಿ ತಿಂಡಿಯ ಮೇಲೆ 5.00 ರೂಪಾಯಿ ಏರಿಕೆ ಮಾಡಿದ್ದಾರೆ ಇದು ಕೂಡ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರೊಬ್ಬರು ತಿಳಿಸಿದ್ದಾರೆ