Home ಕರಾವಳಿ ಸುದ್ದಿಕೋಡಿ : ಕಡಲ ತೀರದಲ್ಲಿ ಬೃಹತ್ ಪ್ರಮಾಣದಲ್ಲಿ ಬೂತಾಯಿ ಮೀನುಗಳು ಅಲೆಗಳೊಂದಿಗೆ ದಡಕ್ಕೆ

ಕೋಡಿ : ಕಡಲ ತೀರದಲ್ಲಿ ಬೃಹತ್ ಪ್ರಮಾಣದಲ್ಲಿ ಬೂತಾಯಿ ಮೀನುಗಳು ಅಲೆಗಳೊಂದಿಗೆ ದಡಕ್ಕೆ

Kodi: Massive Shoal of Sardines Washes Ashore with Waves at Sea Coast

by Kundapur Xpress

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಡಿ ಕಡಲ ತೀರದಲ್ಲಿ ಬೃಹತ್ ಪ್ರಮಾಣದಲ್ಲಿ ಬೂತಾಯಿ ಮೀನುಗಳು ಅಲೆಗಳೊಂದಿಗೆ ದಡಕ್ಕೆ ತೇಲಿ ಬಂದಿತ್ತು. ಕಡಲ ತೀರದಲ್ಲಿ ಮೀನಿನ ರಾಶಿಯೇ ಕಂಡುಬಂದಿದೆ.

ಕೋಡಿ ಕಡಲ ತೀರದ ನೂರಾರು ಮೀಟರ್ ಉದ್ದಕ್ಕೂ ಬೂತಾಯಿ ಮೀನುಗಳು ದಡದಲ್ಲಿ ಬಿದ್ದಿದ್ದವು. ಈ ಅಪರೂಪದ ದೃಶ್ಯವನ್ನು ಕಂಡ ಸ್ಥಳೀಯರು ಹಾಗೂ ಸಾರ್ವಜನಿಕರು ಕಡಲ ತೀರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಉಚಿತವಾಗಿ ಮೀನುಗಳನ್ನು ಹೆಕ್ಕಿಕೊಂಡು ಹೋಗಲು ಮುಗಿಬಿದ್ದರು ಎಂದು ತಿಳಿಯಲಾಗಿದೆ.

ಚೀಲ, ಬುಟ್ಟಿ ಸೇರಿದಂತೆ ಸಿಕ್ಕ ಸಿಕ್ಕ ಪಾತ್ರೆಗಳಲ್ಲಿ ಜನರು ಬೂತಾಯಿ ಮೀನುಗಳನ್ನು ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂತ್ತು

ಕರಾವಳಿ ಭಾಗದಲ್ಲಿ ಇಂತಹ ಘಟನೆಗಳು ಅಪರೂಪವೇನಲ್ಲ. ಇತ್ತೀಚಿನ ತಿಂಗಳುಗಳಲ್ಲಿ ಕುಂದಾಪುರದ ಮರವಂತೆ, ಹೆಜಮಾಡಿ ಹಾಗೂ ಮಂಗಳೂರಿನ ಉಳ್ಳಾಲ ಕಡಲ ತೀರಗಳಲ್ಲಿಯೂ ಇದೇ ರೀತಿಯಲ್ಲಿ ಬೃಹತ್ ಪ್ರಮಾಣದಲ್ಲಿ ಬೂತಾಯಿ ಮೀನುಗಳು ದಡಕ್ಕೆ ಬಂದು ಬಿದ್ದಿದ್ದವು.ಭೌಗೋಳಿಕ ನಕ್ಷೆ ಅನ್ವೇಷಿಸಿ

ಸಮುದ್ರದ ತಳಭಾಗದಲ್ಲಿ ಆಮ್ಲಜನಕದ ಕೊರತೆ ಉಂಟಾಗುವುದು ಅಥವಾ ನೀರಿನ ಉಷ್ಣಾಂಶದಲ್ ದಿಢೀರ್ ಬದಲಾವಣೆ ಸಂಭವಿಸುವುದು ಸೇರಿದಂತೆ ವಿವಿಧ ಕಾರಣಗಳಿಂದ ಮೀನುಗಳ ಹಿಂಡು ದಿಕ್ಕು ತಪ್ಪಿ ದಡದತ್ತ ಬರುವ ಸಾಧ್ಯತೆ ಇದೆ ಎಂದು ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ.

ಕರಾವಳಿಯಲ್ಲಿ ಇಂತಹ ಘಟನೆಗಳು ಹೊಸದೇನಲ್ಲ. ಇತ್ತೀಚಿನ ತಿಂಗಳುಗಳಲ್ಲಿ ಕುಂದಾಪುರದ ಮರವಂತೆ, ಹೆಜಮಾಡಿ ಹಾಗೂ ಮಂಗಳೂರಿನ ಉಳ್ಳಾಲ ಕಡಲ ತೀರಗಳಲ್ಲಿಯೂ ಇದೇ ರೀತಿಯಲ್ಲಿ ಬೃಹತ್ ಪ್ರಮಾಣದಲ್ಲಿ ಬೂತಾಯಿ ಮೀನುಗಳು ದಡಕ್ಕೆ ಬಂದು ಬಿದ್ದಿದ್ದವು.

ಸದ್ಯ ಕೋಡಿ ತೀರದಲ್ಲಿ ಬೂತಾಯಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ.

Related Articles

Leave a Comment

This site uses Akismet to reduce spam. Learn how your comment data is processed.