Home » ಬಾವಿಗೆ ಬಿದ್ದ ಚಿರತೆಯ ರಕ್ಷಣೆ
 

ಬಾವಿಗೆ ಬಿದ್ದ ಚಿರತೆಯ ರಕ್ಷಣೆ

by Kundapur Xpress
Spread the love

ಕುಂದಾಪುರ: ಹೆಮ್ಮಾಡಿ ಸಮೀಪದ ಸುಳ್ಸೆ ಎಂಬಲ್ಲಿ ಸ್ಥಳೀಯ ಬಾಬು ಪೂಜಾರಿ ಎಂಬವರ ಮನೆ ಸಮೀಪದ ತೋಟದಲ್ಲಿನ ಬಾವಿಗೆ ಚಿರತೆ ಬಿದ್ದ ಘಟನೆ ನಡೆದಿದೆ ಬಾವಿಯಲ್ಲಿನ ಚಿರತೆಯನ್ನು ಬೆಳಿಗ್ಗೆ ನೋಡಿದ ಬಾಬು ಪೂಜಾರಿಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಇಲಾಖೆಯವರು ಬಾವಿಗೆ ಬೋನು ಇಳಿಸಿ ಚಿರತೆ ಬೋನಿನೊಳಕ್ಕೆ ಹೋದಾಗ ನಾಜೂಕಾಗಿ ಮೇಲಕ್ಕೆತ್ತಿದ್ದಾರೆ

ಬಾವಿಗೆ ಬಿದ್ದ 2 ವರ್ಷ ಪ್ರಾಯದ ಗಂಡು ಚಿರತೆಯನ್ನು ಅರಣ್ಯಾಧಿಕಾರಿಗಳು ಸ್ಥಳೀಯರ ಸಹಕಾರದಿಂದ ರಕ್ಷಿಸಿದ್ದು ಚಿರತೆಯು ಆರೋಗ್ಯವಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ

ಕುಂದಾಪುರ ಉಪವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ. ನಾಯಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಪರ್ಡ್ ಲೊಬೋ ಮಾರ್ಗದರ್ಶನದಲ್ಲಿ ಕುಂದಾಪುರ ವಲಯ ಅರಣ್ಯಾಧಿಕಾರಿ ಟಿ. ಕಿರಣ್ ಬಾಬು, ಉಪ ವಲಯ ಅರಣ್ಯಾಧಿಕಾರಿಗಳಾದ ಉದಯ್, ಶರತ್, ಗುರುರಾಜ್, ದಿಲೀಪ್, ಸುನೀಲ್, ಗೀತಾ, ಅರಣ್ಯ ಇಲಾಖೆ ಸಿಬ್ಬಂದಿಗಳಾದ ದೀಪಶ್ರೀ, ಮಾಲತಿ, ಬಸವರಾಜ್, ಚಂದ್ರಾವತಿ, ರಾಘವೇಂದ್ರ ಮೊದಲಾದವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

   

Related Articles

error: Content is protected !!