Home ಕರಾವಳಿ ಸುದ್ದಿಶಿರ್ವ : ಕೋಳಿ ಜೂಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರ ದಾಳಿ : 9 ಮಂದಿ ವಶಕ್ಕೆ

ಶಿರ್ವ : ಕೋಳಿ ಜೂಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರ ದಾಳಿ : 9 ಮಂದಿ ವಶಕ್ಕೆ

by Kundapur Xpress

ಶಿರ್ವ: ಉಡುಪಿ ಜಿಲ್ಲೆಯ ಶಿರ್ವ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಜೂಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ಶಿರ್ವ ಪೊಲೀಸರು ದಾಳಿ ನಡೆಸಿ 9 ಜನರನ್ನು ವಶಕ್ಕೆ ಪಡೆದಿದ್ದಾರೆ.

ದಿನಾಂಕ 20/09/2026 ರಂದು ASI ಸುದೇಶ್ ಶೆಟ್ಟಿ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಶಿರ್ವ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಕೋಳಿಗಳ ಕಾಲಿಗೆ ಹರಿತವಾದ ಬಾಲುಗಳನ್ನು ಕಟ್ಟಿ, ಒಂದರ ಮೇಲೆ ಇನ್ನೊಂದನ್ನು ಬಿಟ್ಟು ಹಣ ಪಣಕ್ಕಿಟ್ಟು ಕೋಳಿ ಜೂಜಾಟ ನಡೆಸುತ್ತಿರುವ ಖಚಿತ ಮಾಹಿತಿ ಸಿಕ್ಕಿದೆ.

ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿ ನರೇಂದ್ರ ಪ್ರಭು (61) ಸೂಡಾ ಗ್ರಾಮ,ಪ್ರಕಾಶ್ ಕಾಮತ್ (45) ಬೆಳ್ಮಣ್ ,ರಮೇಶ (49) ಇನ್ನಾ ಗ್ರಾಮ,ಜಯ ಪೂಜಾರಿ (64) ಇನ್ನಾ ಗ್ರಾಮ,ರಾಘವೇಂದ್ರ (48) ಪಾಂಗಾಳ ಗ್ರಾಮ,ಜೆರಾಲ್ಡ್ ಮಥಾಯಸ್ (67) ಶಿರ್ವ ಗ್ರಾಮ,ರಮೇಶ್ ಮೂಲ್ಯ (50) ನಂದಳಿಕೆ,ಅಶೋಕ (48) ಬೋಳ ಗ್ರಾಮ,ರೋಹಿತ್ ಸರೋಜನ್ (26) ನಂದಳಿಕೆ ಎಂಬ 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಲ್ಲಿ ವಶಪಡಿಸಿಕೊಂಡ ವಸ್ತುಗಳು ಜೂಜಾಟಕ್ಕೆ ಬಳಸಿದ್ದ 10,600 ರೂ ಮೌಲ್ಯದ 13 ಕೋಳಿ ಹುಂಜಗಳು,ಕೋಳಿ ಬಾಲು – 5,ನಗದು 2,000 ರೂ., ಸ್ಥಳಕ್ಕೆ ಬಂದಿದ್ದ 10 ದ್ವಿಚಕ್ರ ವಾಹನಗಳು,25 ಪ್ಲಾಸ್ಟಿಕ್ ಕುರ್ಚಿ, ಶಾಮಿಯಾನ ಮತ್ತು 8 ಕಬ್ಬಿಣದ ಪೈಪ್‌ಗಳು ಎಂದು ತಿಳಿಯಲಾಗಿದೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 78/2026 ಕಲಂ 112 BNS 2023, U/s 87,93 KP Act ಮತ್ತು U/s 11(1)(n) Prevention of Cruelty to Animal Act ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

Leave a Comment

This site uses Akismet to reduce spam. Learn how your comment data is processed.