ಲಕ್ಷ್ಮಿ ಶ್ರೀನಿವಾಸ ಕ್ರೆಡಿಟ್ ಸಹಕಾರ ಸಂಘ ನಿ.ಕುಂದಾಪುರ (ತಾಲೂಕು ಭಜನಾ ಮಂಡಳಿಗಳ ಒಕ್ಕೂಟ ರಿ. ಕುಂದಾಪುರ ಇದರ ಅಂಗ ಸಂಸ್ಥೆ)
ಇದರ ಪ್ರಥಮ ವರ್ಷದ ಮಹಾಸಭೆ ಇಂದು ಕುಂದೇಶ್ವರ ದೇವಸ್ಥಾನದಲ್ಲಿ ನೆರವೇರಿತು.
ಸಭೆಯಲ್ಲಿ 2025-26 ನೇ ಸಾಲಿನ ವಾರ್ಷಿಕ ಲೆಕ್ಕಾಚಾರ ಮಂಡನೆ ನಡೆಯಿತು.ಲಕ್ಷ್ಮಿ ಶ್ರೀನಿವಾಸ ವಿದ್ಯಾಸಿರಿ ಖಾತೆ ಹೊಂದಿರುವ 2025-26 ನೇ ಸಾಲಿನಲ್ಲಿ ಉತ್ತಮ ಅಂಕ ಪಡೆದೆ ಮತ್ತು ಎಸ್. ಎಸ್. ಎಲ್. ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಹ ಧನ ನೀಡಲಾಯಿತು.
ಸಭೆಗೆ ಆಗಮಿಸಿದ -ನಮ್ಮ ಸೊಸೈಟಿಯಲ್ಲಿ ಖಾತೆ ಹೊಂದಿರುವ ಭಜನಾ ಒಕ್ಕೂಟ ಭಜನಾ ಮಂಡಳಿಗಳಿಗೆ ಗೌರವ ಪ್ರೋತ್ಸಹಧನ ಅವರ ಖಾತೆಗೆ ವರ್ಗಾಗಿಸಲಾಯಿತು ಮತ್ತು ಷೇರುದಾರರಿಗೆ ನೆನಪಿನ ಕಾಣಿಕೆ ನೀಡಲಾಯಿತು.
ಸಭೆಯಲ್ಲಿ ಅಧ್ಯಕ್ಷರಾದ ನಿತಿನ್ ವಿಠಲವಾಡಿ, ಉಪಾಧ್ಯಕ್ಷರಾದ ಶ್ರೀಮತಿ ಸುಶೀಲ ಅತುಲ್ ಶೆಟ್ಟಿ, ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ಯಳೂರ್ ಹಕ್ಲಾಡಿ, ಸುಬ್ರಮಣ್ಯ ನಾವುಂದ, ಜಗದೀಶ್ ಪೂಜಾರಿ, ಸುಕುಮಾರ್ ಶೆಟ್ಟಿ, ಮುರಳಿಧರ್ ಶೆಟ್ಟಿ, ಸಂತೋಷ್ ಶೆಟ್ಟಿ, ಅಣ್ಣಯ್ಯ ಖಾರ್ವಿ, ಸರೋಜ ವಿ. ಮೂರ್ತಿ, ಭಾನುಮತಿ ಬಿ. ಕೆ, ವನಿತಾ ಹವಾಲ್ದಾರ್, ಪ್ರೀತಿ ಅಜಯ್ ಹವಾಲ್ದಾರ್ ಕಾರ್ಯನಿರ್ವಾಹಣಧಿಕಾರಿ ಹರೀಶ್ ಕೆ. ಸಿಬ್ಬಂದಿ ಶಿಲ್ಪಾ ಪೂಜಾರಿ ಉಪಸ್ಥಿತರಿದ್ದರು. ಕಿಶೋರ್ ಬೈಂದೂರು ಕಾರ್ಯಕ್ರಮ ನಿರೂಪಿಸಿದರು.
