Home ಕರಾವಳಿ ಸುದ್ದಿಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಯಲ್ಲಿ ಪ್ರೇರಣಾ ಮತ್ತು ಸಾನ್ವಿ ವಿಭಾಗ ಮಟ್ಟಕ್ಕೆ ಆಯ್ಕೆ

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಯಲ್ಲಿ ಪ್ರೇರಣಾ ಮತ್ತು ಸಾನ್ವಿ ವಿಭಾಗ ಮಟ್ಟಕ್ಕೆ ಆಯ್ಕೆ

by Kundapur Xpress

ಉಡುಪಿ : ಮಹಾತ್ಮಾ ಗಾಂಧಿ ಕ್ರೀಡಾಂಗಣ ದಲ್ಲಿ ನಡೆದ ಜಿಲ್ಲಾ ಮಟ್ಟದ “ದಸರಾ ಕ್ರೀಡಾಕೂಟ ಸಿ ಎಂ ಕಪ್ 2026”
ಯೋಗಾಸನ ಸ್ಪರ್ಧೆ ಯಲ್ಲಿ ರಿಧಮಿಕ್ ಪೇರ್ ನಲ್ಲಿ ಪ್ರಥಮ ಸ್ಥಾನ ಹಾಗೂ ಆರ್ಟಿಸ್ಟಿಕ್ ಪೇರ್ ನಲ್ಲಿ ದ್ವಿತೀಯ ಸ್ಥಾನ ವನ್ನು ಪಡೆದಿರುತ್ತಾರೆ.ಹಾಗೂ ಇದೇ ತಿಂಗಳು 27 ರಂದು ಕೊಡಗಿನಲ್ಲಿ ನಡೆಯುವ ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆ ಯಾಗಿರುತ್ತಾರೆ.ಇವರು ಕೋಟ ವಿವೇಕ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ 8 ನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರೇರಣಾ ಮಣೂರು ಪಡುಕೆರೆ ನಿವಾಸಿ ಗಳಾದ ನಾಗೇಶ್ ಮತ್ತು ಪ್ರೇಮ ರವರ ಪುತ್ರಿಯಗಿರುತ್ತಾಳೆ.ಹಾಗೂ ಸಾನ್ವಿ ಪಾರಂಪಳ್ಳಿ ನಿವಾಸಿಯಾದ ನಾಗರಾಜ್ ಮತ್ತು ಸರಸ್ವತಿ ಯವರ ಪುತ್ರಿಯಗಿರುತ್ತಾಳೆ. ದ್ವಿವಿಧ ವಿಭಾಗ ಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ತೀವ್ರ ಹರ್ಷ ವ್ಯಕ್ತ ಪಡಿಸಿ, ಶುಭ ಹಾರೈಸಿದ್ದಾರೆ.

Related Articles

Leave a Comment

This site uses Akismet to reduce spam. Learn how your comment data is processed.