ಉಡುಪಿ ಡಾ. ಟಿ ಎಂ ಎ ಪೈ ಕಾಲೇಜ್ ಆಫ್ ಎಜುಕೇಶನ್ (ಬಿ. ಎಡ್ ಕಾಲೇಜ್) ಇದರ ನಿವೃತ್ತ ಹಿರಿಯ ತಂತ್ರಜ್ಞರಾಗಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.ಉಡುಪಿ ಮೂಡನಿಡಂಬೂರು ನಿವಾಸಿ ಕುಂಟಾಡಿ ನೀಲಕಂಠ ಭಗವತ್ (81) ಅವರು ಇಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು ಇವರು ಪತ್ನಿ,ಇಬ್ಬರು ಪುತ್ರಿಯರು ಮತ್ತು ಪುತ್ರ ಟ್ಯಾಕ್ಸ್ ಕನ್ಸಲ್ಟೆಂಟ್ ಆದ ಕೆ ರಂಜನ್ ಭಾಗವತ್ ರನ್ನು ಆಗಲಿದ್ದಾರೆ . ಗೌಡ ಸಾರಸ್ವತ ಸಮಾಜದ ಹಿರಿಯರಾದ ಇವರು ಅಪಾರ ದೈವ ಭಕ್ತರಾಗಿ ಅಪಾರ ಸ್ನೇಹಿತ ವರ್ಗವನ್ನು ಬಂಧು-ಬಳಗವನ್ನು ಅಗಲಿದ್ದಾರೆ.