ಕುಂದಾಪುರ : ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ್ ಪುಜಾರಿ (54) ಅವರು ಇಂದು ಬೆಳಿಗ್ಗೆ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಹೃದಯಾಘಾತಕ್ಕೆ ಒಳಗಾದ ಅವರನ್ನು ತಕ್ಷಣ ಬ್ರಹ್ಮಾವರದ ಪ್ರಣವ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಡಾ.ಸತೀಶ್ ಪುಜಾರಿಯವರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ
ಅವರು ಕುಂದಾಪುರದ ಚರ್ಚ್ ರಸ್ತೆಯಲ್ಲಿರುವ ಶ್ರೀ ಮಾತಾ ಆಸ್ಪತ್ರೆಯ ಮಾಲೀಕ ಹಾಗೂ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು ಮೃತರು ಹೆಂಡತಿ ಮತ್ತು ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ
ಸಂಗೀತ ಪ್ರಿಯರಾಗಿದ್ದ ಡಾ. ಸತೀಶ್ ಪೂಜಾರಿಯವರು ಸ್ವತಃ ಗಾಯಕರಾಗಿದ್ದು ಕುಂದಾಪುರದಲ್ಲಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು ಸಂಗೀತ ಕಾರ್ಯಕ್ರಮಗಳ ಮೂಲಕ ಅನೇಕ ಗಾಯಕರನ್ನು ಕುಂದಾಪುರ ಜನರಿಗೆ ಪರಿಚಯಿಸುವ ಮುಲಕ ಪ್ರೋತ್ಸಾಹಿಸುತ್ತಿದ್ದರು ಅವರ ಅಕಾಲ ನಿಧನವು ಸಂಗೀತ ಪ್ರೇಮಿಗಳಿಗೆ ದಿಘಭ್ರಮೆಯುಂಟು ಮಾಡಿದೆ