ಕುಂದಾಪುರ: ಕುಂದಾಪುರ ತಾಲೂಕಿನ ಯಡಮೂಗ್ಗೆ ಗ್ರಾಮದ ಉಪ್ಪಿನ ಮಕ್ಕಿ ಎಂಬಲ್ಲಿ ಅವಿನಾ ಎಂಬುವರಿಗೆ ಸೇರಿದ ತೋಟದಲ್ಲಿ ರವೀಂದ್ರ ಎಂಬವರು ಅಡಿಕೆ ಮರದಿಂದ ಅಡಿಕೆ ಕೊಯುತ್ತಿರುವಾಗ ಅಕಸ್ಮಾತ್ ಕೈ ತಪ್ಪಿ ಬಿದ್ದು ಗಾಯಗೊಂಡಿದ್ದು ತಕ್ಷಣವೇ ಅವರನ್ನು ಕೋಟೇಶ್ವರದ N R ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರಿಕ್ಷಿಸಿದ ವೈದ್ಯರು ರವೀಂದ್ರರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.