Home » ಮಾದಕ ದ್ರವ್ಯ ಮಾರಾಟ ಜಾಲದ ವಿರುದ್ಧ ಸಮರ : ಎಂಡಿಎಂಎ (MDMA) ಡ್ರಗ್ಸ್ ಸಹಿತ ನಾಲ್ವರು ಆರೋಪಿಗಳ ಬಂಧನ
 

ಮಾದಕ ದ್ರವ್ಯ ಮಾರಾಟ ಜಾಲದ ವಿರುದ್ಧ ಸಮರ : ಎಂಡಿಎಂಎ (MDMA) ಡ್ರಗ್ಸ್ ಸಹಿತ ನಾಲ್ವರು ಆರೋಪಿಗಳ ಬಂಧನ

by Kundapur Xpress
Spread the love

ಬಂಟ್ವಾಳ: ದಕ್ಷಿಣ ಜಿಲ್ಲೆಯಲ್ಲಿ ಮಾದಕ ದ್ರವ್ಯ ಮಾರಾಟ ಜಾಲದ ವಿರುದ್ಧ ಸಮರ ಸಾರಿರುವ ವಿಟ್ಲ ಪೊಲೀಸರು, ನೇರಳಕಟ್ಟೆಯ ಇಂದಿರಾನಗರದ ಬಾಡಿಗೆ ಮನೆಯೊಂದರ ಮೇಲೆ ಮಿಂಚಿನ ದಾಳಿ ನಡೆಸಿ, ಭಾರಿ ಪ್ರಮಾಣದ ಎಂಡಿಎಂಎ (MDMA) ಡ್ರಗ್ಸ್ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೇರಳಕಟ್ಟೆಯ ಇಂದಿರಾನಗರದ ಬಾಡಿಗೆ ಮನೆಯೊಂದರಲ್ಲಿ ಅಶ್ರಫ್ ಜಿ. ಎಂಬಾತ ವಾಸವಿದ್ದು, ಅಲ್ಲಿಂದಲೇ ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ವಿಟ್ಲ ಠಾಣಾ ಪೊಲೀಸ್ ಉಪ ನಿರೀಕ್ಷಕ ರತ್ನಕುಮಾರ್ ಎಂ. ಮತ್ತು ಅವರ ತಂಡವು
ನೆಟ್ಲ ಮುಡ್ನೂರು ಗ್ರಾಮದ ಭಗವಂತ ಕೋಡಿ ನಿವಾಸಿ ಅಶ್ರಫ್ ಜಿ (38) ಎಂಬಾತನ ಮನೆಗೆ ನುಗ್ಗಿದಾಗ, ಅಲ್ಲಿ ಹಫೀಝ್ ಅಲಿಯಾಸ್ ಅಪ್ಪಿ ಅಫ್ಘಾನ್ ಮತ್ತು ಅಶ್ರಫ್ ಎನ್.ಎ ಎಂಬುವವರು ಮಾದಕ ವಸ್ತುವಿನೊಂದಿಗೆ ಪತ್ತೆಯಾಗಿದ್ದಾರೆ.

ಮನೆಯನ್ನು ಕೂಲಂಕಷವಾಗಿ ತಪಾಸಣೆ ನಡೆಸಿದಾಗ 17.97 ಗ್ರಾಂ ಎಂಡಿಎಂಎ (MDMA) ಮಾದಕ ವಸ್ತು ಪತ್ತೆಯಾಗಿದೆ. ಇದರ ಅಂದಾಜು ಮೌಲ್ಯ 1,79,700 ರೂ. ಎಂದು ಅಂದಾಜಿಸಲಾಗಿದೆ.ಕೃತ್ಯಕ್ಕೆ ಬಳಸುತ್ತಿದ್ದ ಚೂರಿ ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಜಾಲದ ಹಿಂದೆ ದೊಡ್ಡ ಮಾಫಿಯಾ ಇರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅ.ಕ್ರ: 61/2026, ಕಲಂ 8(C), 22(C) NDPS Act 1985 ಹಾಗೂ ಅರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

 

Related Articles

error: Content is protected !!