Home » ಕುಂದಾಪ್ರದಲ್ಲಿ ಪ್ರಪಂಚದ 8ನೇ ಅದ್ಭುತ
 

ಕುಂದಾಪ್ರದಲ್ಲಿ ಪ್ರಪಂಚದ 8ನೇ ಅದ್ಭುತ

ಚಾಲಕ ,ಕಂಡಕ್ಟರ್‌ ಹಾಗೂ ಪ್ರಯಾಣಿಕರಿಲ್ಲಿದೇ ಚಲಿಸಿದ ನಿಗೂಢ ಬಸ್

by Kundapur Xpress
Spread the love

ಕುಂದಾಪುರ :‌ ವಿಮಾನ ಏರಬೇಕಾದರೇ ಪೈಲಟ್‌ ಬೇಕೇ ಬೇಕು ರೈಲು ಚಲಿಸಬೇಕಾದರೇ ಚಾಲಕರು ಬೇಕೇ ಬೇಕು ಅದರೊಂದಿಗೆ ಸಿಗ್ನಲ್‌ ಬೇಕು ಆದರೇ ಇಲ್ಲೊಂದು ದುರ್ಗಾಂಬ ಬಸ್‌ ಮಾತ್ರ ತಾನೇ ತಾನಾಗಿ ಚಲಿಸಿದ ಘಟನೆ ಮಾತ್ರ ನಿಗೂಢವಾಗಿದ್ದು ಸಾರ್ವಜನಿಕರನ್ನು ನಿಬ್ಬೇರಗಾಗಿಸಿದೆ

ಹೌದು ಓದುಗರೇ ಈ ಘಟನೆ ಅತೀ ವಿಸ್ಮಯ ಹಾಗೂ ನಿಗೂಢತೆಯನ್ನು ಸೃಷ್ಠಿಸಿದೆ ಕುಂದಾಪುರದ ಹಂಗಳೂರಿನಲ್ಲಿ ದುರ್ಗಾಂಬದ ಬಸ್‌ ಡೀಪೊ ಇರುವುದು ಎಲ್ಲರಿಗೂ ತಿಳಿದ ವಿಷಯ ಅದರೇ ಡೀಪೊದಲ್ಲಿ ನಿಲ್ಲಿಸಿದ ಬಸ್ ಟ್ರಿಪ್ಪಿಗೆ ಹೊರಡುವ ಮೊದಲು ಕಂಡಕ್ಟರ್‌ ಊದುಬತ್ತಿ ಹಚ್ಚಿ ಪೂಜೆ ಸಲ್ಲಿಸಿ ಎದುರುಗಡೆಯ ನಗು ಪ್ಯಾಲೇಸ್‌ಗೆ ಚಹಾ ಕುಡಿಯಲು ತೆರಳಿದ್ದರು

ಕೆಲವೇ ನಿಮಿಷಗಳಲ್ಲಿ ಬಸ್‌ ಏಕಾಎಕೀ ಚಾಲನೆಗೊಂಡು ಎದುರುಗಡೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಕಿದ ಕಬ್ಬಿಣದ ಸರಳಿನ ತಡೆಬೇಲಿಗೆ ಢಿಕ್ಕಿ ಹೊಡೆದು ಹೆದ್ದಾರಿಯನ್ನು ದಾಟಿ ಒಂದು ಅಡಿ ಏತ್ತರದ ಚರಂಡಿಯ ಮೇಲೆ ಹಾಕಿದ ಕಾಂಕ್ರೀಟ್ ಮೇಲುಹಾಸನ್ನು ದಾಟಿ ನಗು ಪ್ಯಾಲೇಸ್‌ ಹೋಟೇಲಿನ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ಕಾರಿಗೆ ಢಿಕ್ಕಿ ಹೊಡೆದು ಕಟ್ಟಡಕ್ಕೆ ತಾಗಿ ನಿಂತಿದೆ

ಬಸ್‌ ಢಿಕ್ಕಿ ಹೊಡೆದ ರಭಸಕ್ಕೆ ಚಹಾ ಸೇವಿಸುತ್ತಿದ್ದ ಕಂಡಕ್ಟರ್‌ ನೋಡಿ ಒಮ್ಮೆಲೇ ದಿಘ್ಬ್ರಾಂತರಾಗಿದ್ದಾರೆ ಬಸ್ಸಿನ ಕೀಯೂ ಇಲ್ಲದೇ ಚಾಲಕನೂ ಇಲ್ಲದೇ ಬಸ್‌ ಚಲಿಸಿದ ಬಸ್‌ ಬಗ್ಗೆ ಸಾರ್ವಜನಿಕರು ಮೂಕವಿಸ್ಮಿತರಾಗಿದ್ದು ಪ್ರಪಂಚದ ಎಂಟನೇ ಅದ್ಭುತವೆಂದು ಬಣ್ಣಿಸುತ್ತಿದ್ದಾರೆ

ಈ ಸಮಯದಲ್ಲಿ ಅಧೃಷ್ಟವಶಾತ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ವಾಹನದ ಸಂಚಾರ ಇಲ್ಲದೇ ಇದ್ದುದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿಲ್ಲ ಎನ್ನುವುದೇ ಸಮಾಧಾನಕರ ಸಂಗತಿಯಾಗಿದೆ

ಡೇಂಜರ್‌ ಏರಿಯಾ

ಕಳೆದ ಹಲವಾರು ತಿಂಗಳಿನಿಂದ ದುರ್ಗಾಂಬ ಡಿಪೋ ಮತ್ತು ನಗು ಪ್ಯಾಲೇಸ್‌ ವಠಾರವು ಹಲವು ನಿಗೂಢ ಘಟನೆಗಳಿಗೆ ಕಾರಣವಾಗಿದ್ದು ಹಲವು ವಿಸ್ಮಯಕಾರಿ ಅಪಘಾತಗಳು ನಡೆದಿದ್ದು ಪ್ರಾಣಹಾನಿ ಸಂಭವಿಸಿದೆ 

ಕುಂದಾಪುರದ ಪೌರ ಕಾರ್ಮಿಕ ಅಪಘಾತದಲ್ಲಿ ಮೃತಪಟ್ಟಿದ್ದು ಇಲ್ಲಿಯೇ ನಗು ಪ್ಯಾಲೇಸಿನ ಎದುರುಗಡೆಯಲ್ಲಿ ರಾತ್ರಿ 11.00 ಗಂಟೆಯ ವೇಳೆಗೆ ಎರಡು ಬೈಕ್‌ಗಳ ಮುಖಾಮುಖಿ ಢಿಕ್ಕಿಯಿಂದ ಇಬ್ಬರು ಬೈಕ್ ಸವಾರರು ಮೃತಪಟ್ಟ ವಿಸ್ಮಯಕಾರಿ ಘಟನೆಯೂ ಇಲ್ಲೇ ನಡೆದಿದೆ ಇದೀಗ ಏಕಾಎಕಿ ಬಸ್‌ ಚಲಿಸಿದ್ದು ಅತ್ಯಂತ ವಿಸ್ಮಯಕಾರಿ ಘಟನೆಯಾಗಿ ಕಂಡು ಬಂದಿದ್ದು ಬಸ್ಸಿನಲ್ಲಿನ ತಾಂತ್ರಿಕ ದೋಷವೇ ಈ ಘಟನೆಗೆ ಕಾರಣವೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆಯಾದರೂ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ

ಕೆ. ಗಣೇಶ್‌ ಹೆಗ್ಡೆ, ಕುಂದಾಪುರ

 

Related Articles

error: Content is protected !!