Home ಕರಾವಳಿ ಸುದ್ದಿಅಕ್ರಮವಾಗಿ MDMA ಮಾದಕ ವಸ್ತು ಮಾರಾಟ

ಅಕ್ರಮವಾಗಿ MDMA ಮಾದಕ ವಸ್ತು ಮಾರಾಟ

Illegal Sale of MDMA Drug

by Kundapur Xpress

ಮಂಗಳೂರು: ಅಕ್ರಮವಾಗಿ MDMA ಮಾದಕ ವಸ್ತುವನ್ನು ಮಾರಾಟ ಮಾಡಲು ಕಾಯುತ್ತಿದ್ದ ಆರೋಪಿಯನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿರುವ ಘಟನೆ ಸಂಭವಿಸಿದೆ.

ಕಾವೂರು ಠಾಣೆಯ ಪೊಲೀಸ್ ಉಪ ನಿರೀಕ್ಷಕ ಮಲ್ಲಿಕಾರ್ಜುನ್ ಬಿರಾದಾರ್ ಅವರು ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬೊಂದೇಲ್ ಜಂಕ್ಷನ್‌ನಿಂದ ಮೂಡುಶೆಡ್ಡೆ ಕಡೆಗೆ ಹೋಗುವ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯೊಬ್ಬ ಪೊಲೀಸರನ್ನು ಕಂಡು ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಪೊಲೀಸರು ಆತನನ್ನು ಸುತ್ತುವರಿದು ವಶಕ್ಕೆ ಪಡೆದು ವಿಚಾರಿಸಿದಾಗ, ಆತ ಮಂಗಳೂರು ಉಳ್ಳಾಲದ ಮೊಹಮ್ಮದ್ ಇರ್ಫಾನ್ ಎ.ಕೆ. (26) ಎಂದು ತಿಳಿದುಬಂದಿದೆ. ಪರಿಶೀಲನೆ ನಡೆಸಿದಾಗ ಆರೋಪಿಯ ಬಳಿ 16 ಗ್ರಾಂ MDMA, 10 ಸಣ್ಣ ಜಿಪ್‌ಲಾಕ್ ಕವರ್‌ಗಳು ಹಾಗೂ HUAWEI Y9 ಮೊಬೈಲ್ ಫೋನ್ ಪತ್ತೆಯಾಗಿದೆ.

ಮಾದಕ ವಸ್ತುವನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಕಾಯುತ್ತಿದ್ದುದಾಗಿ ಆರೋಪಿಯು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪಂಚರ ಸಮಕ್ಷಮದಲ್ಲಿ ಮಾದಕ ವಸ್ತು ಸೇರಿದಂತೆ ಸ್ವತ್ತುಗಳನ್ನು ವಶಪಡಿಸಿಕೊಂಡು, ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ

Related Articles

Leave a Comment

This site uses Akismet to reduce spam. Learn how your comment data is processed.