ಕುಂದಾಪುರ : ಕುಂದಾಪುರ ನಗರದ ವೆಂಕಟರಮಣ ಆರ್ಕೆಡ್ ನಲ್ಲಿರುವ ಕುಂದಾಪುರ ಸೌಹಾರ್ಧ ಕ್ರೆಡಿಕ್ ಕೋ ಆಪರೇಟಿವ್ ಲಿ. ಇದರಲ್ಲಿ ಅವ್ಯವಹಾರ ನಡೆದ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕುಂದಾಪುರ ನಗರದ ಪ್ರಥಮೇಶ್ ಬಿಲ್ಡಿಂಗ್ ನಲ್ಲಿ ವಾಸವಿರುವ ಶ್ರೀಧರ್ ನಾವಡ ಎಂಬವರು ದೂರು ನೀಡಿದ್ದು ಅವರ ಮಗಳಾದ ಶ್ರೀರಕ್ಷಾ ಇವರ ಹೆಸರಿನಲ್ಲಿ 2 ಲಕ್ಷ ಮತ್ತು ಶ್ರೀ ವರ್ಷಾ ಇವರ ಹೆಸರಿನಲ್ಲಿ 5 ಲಕ್ಷ ಹಣವನ್ನು ಠೇವಣಿ ಇಟ್ಟಿದ್ದು ಸದ್ರಿ ಠೇವಣಿ ಹಣವು ವಾಯಿದೆ ಮುಗಿದರೂ ಸದ್ರಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಕರು ಮತ್ತು ನಿರ್ದೇಶಕರುಗಳಾಗಿರುವ ಆರೋಪಿತರು ನಾವಡರವರ ಮಕ್ಕಳ ಠೇವಣಿ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿರುತ್ತಾರೆ. ಅಲ್ಲದೇ ಇತರೇ ಸುಮಾರು 44 ಜನರ ಒಟ್ಟು 7,18,24,831/- ರೂ ಠೇವಣಿ ಹಣವನ್ನು ಕೂಡಾ ವಾಯಿದೆ ಮುಗಿದರೂ ವಾಪಾಸ್ಸು ನೀಡಿದೇ ಇರುವುದು ನನ್ಗ ಗಮನಕ್ಕೆ ಬಂದಿರುವುದಾಗಿದೆ. ಕುಂದಾಪುರ ಸೌಹಾರ್ದ ಕ್ರೆಡಿಕ್ ಕೋ ಆಪರೇಟಿವ್ ಲಿ. ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ, ನಿರ್ದೇಶಕರು ಸೇರಿಕೊಂಡು ಒಳಸಂಚು ರೂಪಿಸಿ ಒಟ್ಟು 7,25,24,831/- ರೂ ಹಣವನ್ನು ಠೇವಣಿದಾರರಿಗೆ ವಾಪಾಸ್ಸು ನೀಡದೇ ನಂಬಿಕೆ ದ್ರೋಹ ಮತ್ತು ಮೋಸ ಮಾಡಿ ಅಧಿಕಾರ ದುರುಪಯೋಗ ಮಾಡಿರುತ್ತಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ