Home » 13 ವರ್ಷಗಳ ಹಿಂದಿನ ಕಾಣೆಯಾದ ಯುವಕನ ಪತ್ತೆ
 

13 ವರ್ಷಗಳ ಹಿಂದಿನ ಕಾಣೆಯಾದ ಯುವಕನ ಪತ್ತೆ

by Kundapur Xpress
Spread the love

ಉಡುಪಿ ಜಿಲ್ಲೆಯಲ್ಲಿ 13 ವರ್ಷಗಳ ಹಿಂದಿನ ಕಾಣೆಯಾದ ಯುವಕನ ಪತ್ತೆ ಪ್ರಕರಣದಲ್ಲಿ ದೊಡ್ಡ ಬೀಗ ತೆರೆದಿದೆ.ಡಿಸೆಂಬರ್ 2012ರಂದು, ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಪ್ರಭಾಕರ ಪ್ರಭು ಅವರ ಮಗ ಅನಂತ ಕೃಷ್ಣ ಪ್ರಭು, ಆಗ 16 ವರ್ಷದವನು, ಮನೆಯಿಂದ ದೇವಸ್ಥಾನಕ್ಕೆ ಹೋಗಿ ವಾಪಸ್ಸು ಮನೆಗೆ ಬಾರದ ಹಿನ್ನೆಲೆ ಕಾಣೆಯಾಗಿದ್ದನು. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ವಿಶೇಷ ತನಿಖಾ ತಂಡವು ಹಲವು ಆಯಾಮಗಳಲ್ಲಿ ತನಿಖೆ ನಡೆಸಿ, ಕೊನೆಗೂ ಸುಮಾರು 13 ವರ್ಷಗಳ ನಂತರ ಅನಂತ ಕೃಷ್ಣ ಪ್ರಭು, ಈಗ 29 ವರ್ಷದವನಾಗಿರುವ ಇವನನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿದೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ಉಡುಪಿ ಉಪವಿಭಾಗದ ಡಿವೈಎಸ್‌ಪಿ ಪ್ರಭು ಡಿ.ಟಿ. ಅವರ ಮಾರ್ಗದರ್ಶನದಲ್ಲಿ, ಬ್ರಹ್ಮಾವರ ಪಿಎಸ್ಐ ಸುದರ್ಶನ್ ದೊಡಮನಿ, ಉಡುಪಿ ನಗರ ಪಿಎಸ್ಐ ಈರಣ್ಣ ಶಿರಗುಂಪಿ ಹಾಗೂ ತಂಡದ ಸದಸ್ಯರಾದ ಹೆಚ್ಸಿ ಇಮ್ರಾನ್, ಹೆಚ್ಸಿ ಚೇತನ್, ಪಿಸಿ ಸಂತೋಷ್ ದೇವಾಡಿಗ ಮತ್ತು ಪಿಸಿ ಮಲ್ಲಯ್ಯ ಹಿರೇಮಠ ಅವರು ಯಶಸ್ವಿಯಾಗಿ ಕೈಗೊಂಡಿದ್ದಾರೆ.

 

Related Articles

error: Content is protected !!