Home » ಅಕ್ರಮ ಹಣ ಜಪ್ತಿ :13 ಲಕ್ಷ ವಶ
 

ಅಕ್ರಮ ಹಣ ಜಪ್ತಿ :13 ಲಕ್ಷ ವಶ

by Kundapur Xpress
Spread the love

ಇಂದು ಮುಂಜಾನೆ 13 ಲಕ್ಷ ವಶ

ಕುಂದಾಪುರ : ಕುಂದಾಪುರ ನಗರದ ಸಂಗಮ್‌ ಜಂಕ್ಷನ್‌ ಬಳಿ ತಪಾಸಣೆ ವೇಳೆ ಬೈಕ್‌ ಸವಾರನೊಬ್ಬನು ಸಾಗಿಸುತ್ತಿದ್ದ 13 ಲಕ್ಷ ರೂ. ನಗದನ್ನು ಇಂದು ಮುಂಜಾನೆ ಕುಂದಾಪುರ ಪೋಲೀಸರು ವಶಪಡಿಸಿಕೊಂಡಿದ್ದಾರೆ

ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಕುಂದಾಪುರ ಪೋಲೀಸರು ನಗರದ ಅನೇಕ ಕಡೆಗಳಲ್ಲಿ ತಪಾಸಣೆಯನ್ನು ಕೈಗೊಂಡಿದ್ದು ಇಂದು ಮುಂಜಾನೆ 5.30 ರ ವೇಳೆಗೆ ಕೋಟೇಶ್ವರ ನಿವಾಸಿಯಾದ ದೀಲಿಪ್‌ ಗೋಡ್ಸೆ ಎಂಬವರು ಕೋಟೇಶ್ವರದಿಂದ  ಬೈಂದೂರು ಕಡೆ ತೆರಳುತ್ತಿರುವ ಸಂದರ್ಭದಲ್ಲಿ ಕುಂದಾಪುರದ ಠಾಣಾಧಿಕಾರಿ ಪ್ರಸಾದ್‌ ನೇತೃತ್ವದ ತಂಡ ನಗರದ ಸಂಗಮ್‌ ಜಂಕ್ಷನ್‌ ಬಳಿ ಕೆ ಏ 20. ಜೆ 5252 ನಂಬ್ರದ ಕಪ್ಪು ಬಣ್ಣದ ಪಲ್ಸರ್‌ ಬೈಕನ್ನು ನಿಲ್ಲಿಸಿ ಬೈಕ್‌ ಹಾಗೂ ಸವಾರನನ್ನು ತಪಾಸಿಸಿದಾಗ  ಅವರ ಪಲ್ಸರ್‌ ಬೈಕ್‌ ನ ಹಿಂಬದಿಯ ಬಾಕ್ಸ್ ನಲ್ಲಿ ಬಟ್ಟೆಯ ಚೀಲದಲ್ಲಿ 500 ರೂ. ಮುಖಬೆಲೆಯ 2.600 ನೋಟುಗಳು ಕಂಡು ಬಂದಿದ್ದು

ಹಣದ ಬಗ್ಗೆ ವಿಚಾರಿಸಿದಾಗ ಯಾವುದೇ ದಾಖಲೆಗಳು ಇಲ್ಲದಿರುವುದರಿಂದ 13 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದ್ದು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಡಿವೈಎಸ್ಪಿ ಬೆಳ್ಳಿಯಪ್ಪ ನವರ ಮಾರ್ಗದರ್ಶನದಲ್ಲಿ ಕುಂದಾಪುರ ಠಾಣಾ ನಿರೀಕ್ಷಕರಾದ ನಂದಕುಮಾರ ರವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ

   

Related Articles

error: Content is protected !!