1K
ಕುಂದಾಪುರ : ನಗರದ ಚಿಕ್ಕನಸಾಲು ರಸ್ತೆಯಲ್ಲಿರುವ ಕಿರಾಣಿ ಅಂಗಡಿಯೊಂದಕ್ಕೆ ಬೆಂಕಿ ಬಿದ್ದು 4.0 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದ ಘಟನೆ ಇಂದು ಬೆಳಿಗ್ಗೆ 8.00 ಗಂಟೆಗೆ ನಡೆದಿದೆ
ನಗರದ ಚಿಕ್ಕನಸಾಲು ರಸ್ತೆಯಲ್ಲಿರುವ ಚಂದ್ರಶೇಖರ್ (ಚಂದ್ರಣ್ಣ) ಎಂಬವರ ಕಿರಾಣಿ ಅಂಗಡಿಗೆ ಅಕಸ್ಮಿಕ ಬೆಂಕಿ ತಗುಲಿ ಅಂಗಡಿಯಲ್ಲಿದ್ದ ಸಾಮಾನುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ
ಅಂಗಡಿ ಮಾಲಿಕ ಚಂದ್ರಣ್ಣ ಎಂಬವರು ಬೆಳಿಗ್ಗೆ ಅಂಗಡಿಯ ಬಾಗಿಲನ್ನು ತೆರೆದು ದೇವರಿಗೆ ದೀಪವನ್ನು ಹಚ್ಚಿ ಹತ್ತಿರದ ಶ್ರೀ ಮೈಲಾರೇಶ್ವರ ದೇವಸ್ಥಾನಕ್ಕೆ ಹೋಗಿ ಕೆಲವೇ ನಿಮಿಷಗಳಲ್ಲಿ ಅಂಗಡಿಗೆ ವಾಪಾಸ್ಸು ಬರುವುದರೊಳಗೆ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ
ಅಂಗಡಿಯೊಳಗಿದ್ದ ಹೊಸ ಫ್ರಿಡ್ಜ್ ಕಪಾಟು ಶೋಕೇಸ್ ಮುಂತಾದ ಫರ್ನಿಚರ್ ಕಿರಾಣಿ ಸಾಮಾನುಗಳು ಬೆಂಕಿಯ ಕೆನ್ನಾಲೆಗೆಗೆ ಸಂಪೂರ್ಣ ಕರಗಿಹೋಗಿದ್ದು ಅಂದಾಜು 4.0 ರಿಂದ 5.0 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು ಅಗ್ನಿಶಾಮಕ ದಳದವರು ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ

