ಉಡುಪಿ: ನಗರದ ಅಂಬಲಪಾಡಿಯ ಇಂದಿರಾ ನಗರದಲ್ಲಿ ಮನೆಯೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಬಾರ್ ಮಾಲಕರೊಬ್ಬರು ಮೃತಪಟ್ಟು ಅವರ ಪತ್ನಿ ಗಂಭೀರ ಗಾಯಗೊಂಡ ಘಟನೆ ಇಂದು ಸೋಮವಾರ ಮುಂಜಾನೆ ನಡೆದಿದೆ
ಘಟನೆಯಲ್ಲಿ ನಗರದ ಅಂಬಲಪಾಡಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್ನ ಮಾಲಕರಾದ ರಮಾನಂದ ಶೆಟ್ಟಿಯವರು ಮೃತಪಟ್ಟು ಅವರ ಪತ್ನಿ ಅಶ್ವಿನಿ ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ ಅಶ್ವಿನಿಯವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ
ಸುದ್ದಿ ತಿಳಿದ ತಕ್ಷಣ ಆಗಮಿಸಿದ ಅಗ್ನಿಶಾಮಕ ಪಡೆಯವರು ಬೆಂಕಿ ನಂದಿಸುವ ಕಾರ್ಯವನ್ನು ಕೈಗೊಂಡಿದ್ದು ಶಾರ್ಟ್ ಸರ್ಕೂಟ್ನಿಂದಾಗಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ