Home » ಕುಂದಾಪುರದ ಯೋಧ ಅನೂಪ್‌ ಪೂಜಾರಿಗೆ ವೀರಗತಿ
 

ಕುಂದಾಪುರದ ಯೋಧ ಅನೂಪ್‌ ಪೂಜಾರಿಗೆ ವೀರಗತಿ

ಪೂಂಛ್‌ನಲ್ಲಿ ಕಂದಕಕ್ಕೆ ಉರುಳಿದ ಬಸ್

by Kundapur Xpress
Spread the love

ಕುಂದಾಪುರ :ಶ್ರೀನಗರದ ಪೊಂಚ್ ಜಿಲ್ಲೆಯ ಬಲ್ಲೋಯ್ ಪ್ರದೇಶದಲ್ಲಿ ಮಂಗಳವಾರ ಸೇನಾ ವಾಹನ 350 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ 5 ಯೋಧರು ವೀರಗತಿ ಹೊಂದಿದ್ದು ಅದರಲ್ಲಿ ಕುಂದಾಪುರ ಸಮೀಪದ ಬೀಜಾಡಿ ನಿವಾಸಿಯಾದ ಅನೂಪ್‌ ಪೂಜಾರಿಯವರು ವೀರ ಮರಣ ಹೊಂದಿದ್ದಾರೆ

ಅವರ ಮೃತದೇಹವು ನಾಳೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಲಿದ್ದು ನಂತರ ಕೋಟೇಶ್ವರ ಸಮೀಪದ ಬೀಜಾಡಿಯ ಅವರ ಸ್ವಗೃಹದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರೀಯೆ ನಡೆಯಲಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿದೆ

ಅನೂಪ್‌ ಪೂಜಾರಿಯವರು ಲೆಫ್ಟಿನೆಂಟ್‌ ಹವಲ್ದಾರ್‌ ಆಗಿ ಸೇನೆಯಲ್ಲಿ ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ

ಅನೂಪ್‌ ಪೂಜಾರಿಯವರು ಪತ್ನಿ ಮಂಜುಶ್ರೀ ಅನೂಪ್‌ ಹಾಗೂ ಮಗಳು ಇಶಾನ್ವಿ ಅನೂಪ್‌ ಪೂಜಾರಿಯವರನ್ನು ಅಗಲಿದ್ದಾರೆ  

 

Related Articles

error: Content is protected !!