Home » ಹಿಂದು ದೇವರ ಅವಹೇಳನ ಪ್ರಕರಣ:ಇಬ್ಬರ ಅಮಾನತು
 

ಹಿಂದು ದೇವರ ಅವಹೇಳನ ಪ್ರಕರಣ:ಇಬ್ಬರ ಅಮಾನತು

by Kundapur Xpress
Spread the love

ಮಂಗಳೂರು: ಮಂಗಳೂರಿನ ಸಂತ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯೊಬ್ಬರು ಹಿಂದುಗಳು ಅತ್ಯಂತ ಶ್ರದ್ದಾಭಕ್ತಿಯಿಂದ ಪೂಜಿಸುವ ಪ್ರಭು ಶ್ರೀರಾಮನ ಬಗ್ಗೆ ಅವಹೇಳನ ಮಾಡಿದ ಆರೋಪ ಕೇಳಿ ಬಂದಿದ್ದು,ಈ ಹಿನ್ನಲೆಯಲ್ಲಿ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಶಾಲೆಯ ಆಡಳಿತ ಮಂಡಳಿಯವರು ಶಿಕ್ಷಕಿ ಸಿಸ್ಟರ್‌ ಪ್ರಭಾ ಹಾಗೂ ಶಿಕ್ಷಕ ಸ್ಟೀವನ್‌ ಎಂಬವರನ್ನು ಅಮಾನತು ಮಾಡಿದ್ದಾರೆ

ಘಟನೆಯ ಹಿನ್ನಲೆ

ಈ ಶಾಲೆಯ ಏಳನೇ ತರಗತಿಯ ಪಾಠದ ಸಮಯದಲ್ಲಿ ಶಿಕ್ಷಕಿಯೋರ್ವರು ವಿನಾಕಾರಣ ಹಿಂದೂ ಧರ್ಮ, ಶ್ರೀರಾಮ ಹಾಗೂ ದೇಶದ ಪ್ರಧಾನಿ ಮೋದಿಯವರನ್ನು ಮಕ್ಕಳ ಮುಂದೆ ಕೀಳುಮಟ್ಟದ ಪದಗಳಲ್ಲಿ ಅವಮಾನಿಸಿ ವಿಷ ಬೀಜ ಬಿತ್ತಲು ಯತ್ನಿಸಿರುವುದು ಮತ್ತು ತಮ್ಮ ಧೋರಣೆಯನ್ನು ಮಕ್ಕಳ ಮೇಲೆ ಹೇರಿರುವುದು ಅಕ್ಷಮ್ಯವಾಗಿದೆ. ಸರ್ವಧರ್ಮದ ಮಕ್ಕಳು ಬೆರೆತಿರುವ ಶಾಲೆಗಳಲ್ಲಿ ಯಾವುದೇ ಧರ್ಮದ ಅವಹೇಳನ ಮಾಡುವುದು ಸಲ್ಲ ಅದರಲ್ಲೂ ಶಿಕ್ಷಕರೇ ಇಂತಹ ದುರ್ವತ್ರನೆ ತೋರಿದರೆ ಅದಕ್ಕೆ ಕ್ಷಮೆಯೇ ಇಲ್ಲ ಈಗಾಗಲೇ ಹಲವಾರು ಮಕ್ಕಳ ಪೋಷಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಮಕ್ಕಳಿಗೆ ತಪ್ಪು ಸಂದೇಶ ನೀಡಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ಶಿಕ್ಷಕಿಯ ಮೇಲೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಮತ್ತು ಪೋಷಕರು ಆಗ್ರಹ ಪಡಿಸಿದ್ದರು

   

Related Articles

error: Content is protected !!