Home » ಮಸೀದಿಯ ಕಾಣಿಕೆ ಡಬ್ಬಿ ಕಳವು : ಆರೋಪಿಯ ಬಂಧನ
 

ಮಸೀದಿಯ ಕಾಣಿಕೆ ಡಬ್ಬಿ ಕಳವು : ಆರೋಪಿಯ ಬಂಧನ

by Kundapur Xpress
Spread the love

ಸುಳ್ಯ : ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಾಜೆ ಗೂನಡ್ಕ ಎಂಬಲ್ಲಿರುವ ಮಸೀದಿಯ ಆವರಣದಲ್ಲಿದ್ದ ಕಾಣಿಕೆ ಡಬ್ಬಿಯನ್ನು ದಿನಾಂಕ 30.03.2026 ರಂದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 45/2026 ಕಲಂ 303(2)BNS -2023 ಪ್ರಕರಣ ದಾಖಲಿಸಿಕೊಂಡು ತನಿಖೆ ಹಂತದಲ್ಲಿತ್ತು.

ದಿನಾಂಕ 06.04.2026 ರಂದು ಸುಳ್ಯ ಕೆಮ್ರಾಜೆ ಎಲಿಮಲೆ ಎಂಬಲ್ಲಿ ಪ್ರಕರಣದ ಆರೋಪಿ ಆಂದ್ರಪ್ರದೇಶದ ಪಶ್ಚಿಮ ಗೊದಾವರಿ ಮೂಲದ ನಿವಾಸಿ ಮಹಮ್ಮದ್‌ ಸಲ್ಮಾನ್‌ ಎಂಬಾತನನ್ನು ಸುಳ್ಯ ಪೊಲೀಸರು ದಸ್ತಗಿರಿ ಮಾಡಿ, ಆರೋಪಿತನಿಂದ ಕಳವು ಮಾಡಿದ 2,000 ರೂ ನಗದು ಹಣವನ್ನು ಸ್ವಾದೀನಪಡಿಸಿಕೊಂಡು, ಆರೋಪಿಯನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಮಾನ್ಯ ನ್ಯಾಯಾಲಯವು ಆರೋಪಿ ಮಹಮ್ಮದ್‌ ಸಲ್ಮಾನ್‌ ಎಂಬಾತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

 

Related Articles

error: Content is protected !!