Home » ಭಂಡಾರ್‌ಕಾರ್ಸ್‌ ಪದವಿ ಪೂರ್ವ ಕಾಲೇಜಿಗೆ 2025-2026ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವು ಶೇಕಡಾ 92%
 

ಭಂಡಾರ್‌ಕಾರ್ಸ್‌ ಪದವಿ ಪೂರ್ವ ಕಾಲೇಜಿಗೆ 2025-2026ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವು ಶೇಕಡಾ 92%

by Kundapur Xpress
Spread the love

ಕುಂದಾಪುರ: ಇಲ್ಲಿನ ಭಂಡಾರ್‌ಕಾರ್ಸ್‌ ಪದವಿ ಪೂರ್ವ ಕಾಲೇಜಿಗೆ 2025-2026ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವು ಶೇಕಡಾ 92% ದೊರೆತಿದೆ ಎಂದು ಭಂಡಾರ್ಕಾರ್ಸ್‌ ಪದವಿ ಪೂರ್ವ ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಪ್ರಥಮ – ಅನಿಲ್‌ ಜೀವನ್‌ ಲೋಬೋ (578/600), ದ್ವಿತೀಯ- ಅಶ್ವಿನಿ ಪ್ರಭು (575/600), ತೃತೀಯ -ಭೂಮಿಕಾ ಎಂ ಡಿ (574/600), ನಾಲ್ಕನೇ ಸ್ಥಾನವನ್ನು ರವೀಂದ್ರ ಮಾಸ್ತಿ ಗೊಂಡ 573/600 ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪ್ರಥಮ- ಸಬಾ (586/600), ದ್ವಿತೀಯ- ನವ್ಯ (581/600), ತೃತೀಯ- ಪ್ರಿಯಾ (574/600), ನಾಲ್ಕನೇ- ರೇಣುಕಾ (573/600), ಪಂಚಮ ಸ್ಥಾನವನ್ನು ಭೂಮಿಕಾ (571/600) ಪಡೆದುಕೊಂಡಿದ್ದಾರೆ.
ಕಾಲೇಜಿನ 63 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಹಾಗೂ  102  ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿಉತ್ತೀರ್ಣರಾಗಿರುತ್ತಾರೆ. ಅವರಿಗೆ ಕಾಲೇಜಿನ ವಿಶ್ವಸ್ಥ ಮಂಡಳಿ ಮತ್ತು ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ಅಧ್ಯಾಪಕೇತರರು, ವಿದ್ಯಾರ್ಥಿಗಳು ಅಭಿನಂದನೆ ತಿಳಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related Articles

error: Content is protected !!