Home ಕರಾವಳಿ ಸುದ್ದಿಕುಂದಾಪುರ : ಬರ ಪೀಡಿತ ತಾಲ್ಲೂಕು ಘೋಷಣೆ ಮಾಡಲು ಆಗ್ರಹ : ಕೆ. ವಿಕಾಸ್ ಹೆಗ್ಡೆ

ಕುಂದಾಪುರ : ಬರ ಪೀಡಿತ ತಾಲ್ಲೂಕು ಘೋಷಣೆ ಮಾಡಲು ಆಗ್ರಹ : ಕೆ. ವಿಕಾಸ್ ಹೆಗ್ಡೆ

by Kundapur Xpress

ಮಳೆ ಕೈಕೊಟ್ಟ ಕಾರಣ ಬೀಕರ ಬರಗಾಲಕ್ಕೆ ತುತ್ತಾಗಿರುವ ಕುಂದಾಪುರ ತಾಲ್ಲೂಕನ್ನು ರಾಜ್ಯ ಸರ್ಕಾರ ಬರ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಬೇಕಾಗಿ ಕುಂದಾಪುರ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.
ಈ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿ ಅಣೆಕಟ್ಟುಗಳಲ್ಲಿ ನೀರಿನ ಒಳ ಹರಿವು ಕಡಿಮೆಯಾಗಿರುವ ಈ ಕಾಲಘಟ್ಟದಲ್ಲಿ ಕುಂದಾಪುರ ತಾಲ್ಲೂಕಿನಲ್ಲೂ ಕೂಡ ಮಳೆ ಕೊರತೆಯಿಂದ ಬೀಕರ ಬರಗಾಲ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಬತ್ತದ ಕೃಷಿ ಸಂಪೂರ್ಣ ಹಾನಿಯಾಗಿದ್ದು, ಮಳೆ ಕೊರತೆಯಿಂದ ಇತರೆ ವಾಣಿಜ್ಯ ಬೆಳೆಗಳೂ ಕೂಡ ಮಳೆ ಕೊರತೆಯಿಂದ ಹಾನಿಗೆ ಒಳಗಾಗಿವೆ. ಇನ್ನು ಕುಂದಾಪುರ ತಾಲ್ಲೂಕಿನ ಜೀವನದಿಯಾದ ವರಾಹಿ ನದಿಗೆ ಮೂಲವಾದ ಮಾಣಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯ ಕಡಿಮೆಯಾಗಿದ್ದು ಈ ವರ್ಷ ವರಾಹಿ ನದಿ ನೀರು ನಂಬಿರುವ ನಗರಸಭೆ, ಪುರಸಭೆ ಮತ್ತು ಗ್ರಾಮ ಪಂಚಾಯತುಗಳಿಗೆ ಅತೀವ ಕುಡಿಯುವ ನೀರಿನ ತೊಂದರೆ ಜನವರಿ ತಿಂಗಳಲ್ಲೇ ತಲೆದೋರುವುದು ಖಂಡಿತ. ಅದರ ಜೊತೆ ವರಾಹಿ ನದಿ ನೀರು ನಂಬಿರುವ ನದಿ ತಟದ ಗ್ರಾಮದ ಕೃಷಿಕರಿಗೂ ಕೂಡ ತೀವ್ರ ನೀರಿನ ಅಭಾವ ಈ ಭಾರಿ ಆಗಲಿದ್ದು. ಅದಕ್ಕಾಗಿ ವರಾಹಿ ನದಿಯ ನೀರನ್ನು ಎತ್ತಲು ಯಾವುದೇ ಯೋಜನೆಗಳನ್ನು ಈ ಭಾರಿ ಜಾರಿಗೆ ತರಬಾರದು ಹಾಗೂ ರೈತರ ಸಂಕಷ್ಟಕ್ಕೆ ಸಹಾಯ ಮಾಡಲು ಸರ್ಕಾರ ಕುಂದಾಪುರ ತಾಲ್ಲೂಕನ್ನು ಬರ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

Related Articles

Leave a Comment

This site uses Akismet to reduce spam. Learn how your comment data is processed.