ಕುಂದಾಪುರ : ಕುಂಭಾಸಿಯ ಶ್ರೀ ನಾಗಚಲ ಅಯ್ಯಪ್ಪ ದೇವಸ್ಥಾನದಲ್ಲಿ ಶ್ರೀ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಕುಂದಾಪುರ ಇದರ ಪದಗ್ರಹಣ ಸಮಾರಂಭ ನೆರವೇರಿತು.ಸಮಾರಂಭದಲ್ಲಿ 36 ವರ್ಷಗಳಿಗಿಂತ ಹೆಚ್ಚು ಬಾರಿ ಶಬರಿಮಲೆ ಯಾತ್ರೆ ಮಾಡಿದ ಗುರುಸ್ವಾಮಿಗಳಿಗೆ ಗುರುವಂದನೆ ಸಲ್ಲಿಸಲಾಯಿತು

ಬಡಾಕೆರೆ ನಾಗೇಂದ್ರ ಅಡಿಗರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ನೂತನ ಮಂಡಳಿಯನ್ನು ರಚಿಸಲಾಯಿತು ಅಧ್ಯಕ್ಷರಾಗಿ ಶಿವರಾಮ ಅಮಿನ್ ಕೋಟೇಶ್ವರ ಕಾರ್ಯದರ್ಶಿಯಾಗಿ ನಿತಿನ್ ವಿಠಲವಾಡಿ ಜವಾಬ್ದಾರಿ ವಹಿಸಿಕೊಂಡರು

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ರಾಧಾಕೃಷ್ಣ ಮೆಂಡನ್, ಉಪಾಧ್ಯಕ್ಷರಾದ ವಿಜಯ ಕೊಡವೂರು, ಕಾರ್ಯದರ್ಶಿ ರಂಜಿತ್, ಗಣೇಶ್ ಕೋಟ, ಕುಂದಾಪುರ ಘಟಕದ ಗೌರವಾಧ್ಯಕ್ಷರಾದ ರಘುಚಂದ್ರ ಎಲ್.ಐ.ಸಿ ಗುರುಸ್ವಾಮಿ, ಉಪಾಧ್ಯಕ್ಷರಾದ ಜಯರಾಮ್ ಕೋಟೇಶ್ವರ,ಅಣ್ಣಪ್ಪ ಆನಗಳ್ಳಿ,ಗಣೇಶ್ ಮುದ್ದುಗುಡ್ಡೆ, ಗೌರವ ಸಲಹೆಗರಾದ ರಾಮಕೃಷ್ಣ ಕುಂದಾಪುರ,ಕರಿಯಪ್ಪ ಕೊಠಾರಿ ವಾಲ್ತುರು,ಚಂದ್ರ ಬರೆಕಟ್ಟು, ಶೀನಾ ಕಾಂಚನ್,ಜೊತೆ ಕಾರ್ಯದರ್ಶಿ ಪ್ರವೀಣ್ ಖಾರ್ವಿಕೇರಿ,
ಸಂಘಟನಾ ಕಾರ್ಯದರ್ಶಿ ಅನಿಲ್ ಖಾರ್ವಿ ಮದ್ದುಗುಡ್ಡೆ,ಯೋಗಂ ಪ್ರಮುಖ ಜಯಕರ ಪೂಜಾರಿ ಗುಲ್ವಾಡಿ ಮತ್ತಿತರರು ಉಪಸ್ಥಿತರಿದ್ದರು. ಭೂಮಿ ನೆರಳಕಟ್ಟೆ ಪ್ರಾರ್ಥನೆಗೈದರು ಅಧ್ಯಕ್ಷ ಅಧ್ಯಕ್ಷರಾದ ಶಿವರಾಮ ಅಮೀನ್ ಕೋಟೇಶ್ವರ ವಂದಿಸಿದರು ಕಾರ್ಯದರ್ಶಿ ನಿತಿನ್ ವಿಠಲವಾಡಿ ಕಾರ್ಯಕ್ರಮ ನಿರ್ವಹಿಸಿದರು

