ಕುಂದಾಪುರ : ಕುಂದಾಪುರ ನಗರದ ಶಾಸ್ತ್ರೀಪಾರ್ಕ್ ಸಮೀಪದಲ್ಲಿರುವ ಜೆ.ಕೆ. ಟವರ್ಸ್ ನಲ್ಲಿ ನೂತನ ಸಹಕಾರಿ ಸಂಘ ಬಂಟರ ಕ್ರೆಡಿಟ್ ಸಹಕಾರಿ ಸಂಘವು ಇಂದು ಆದಿತ್ಯವಾರ ಉದ್ಘಾಟನೆಗೊಳ್ಳಲಿದ್ದು ಬಂಟರ ಯಾನೆ ನಾಡವರ ಸಂಕಿರ್ಣದ ಆರ್. ಎನ್. ಶೆಟ್ಟಿ ಸಭಾ ಭವನದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ
ನೂತನ ಶಾಖೆ ಉದ್ಘಾಟನೆಯನ್ನು ನಿವೃತ್ತ ಲೋಕಾಯುಕ್ತ ನ್ಯಾ! ಸಂತೋಷ ಹೆಗ್ಡೆ ನೆರವೇರಿಸಲಿದ್ದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರರಾದ ಬಿ ಅಪ್ಪಣ್ಣ ಹೆಗ್ಡೆಯವರು ಸಭಾ ಕಾರ್ಯಕ್ರಮದ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ
ಭದ್ರತಾ ಕೊಠಡಿ ಉದ್ಘಾಟನೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಅಧ್ಯಕ್ಷ ಅಜಿತ್ ಕುಮಾರ ರೈ ಮಾಲಾಡಿ, ಶಾಸಕ ಕಿರಣ್ ಕುಮಾರ್ ಕೊಡ್ಡಿ ಗಣಕಯಂತ್ರದ ಉದ್ಘಾಟನೆ, ಸಾಲ ಪತ್ರ ವಿತರಣೆಯನ್ನು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಶೇರು ಪತ್ರ ವಿತರಣೆಯನ್ನು ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಠೇವಣಿ ಪತ್ರಗಳ ವಿತರಣೆಯನ್ನು ಮಾಜಿ ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಅಧ್ಯಕ್ಷರ ಕೊಠಡಿ ಉದ್ಘಾಟನೆಯನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ನೆರವೇರಿಸಿ, ಅಧ್ಯಕ್ಷತೆಯನ್ನು ಬಂಟರ ಕ್ರೆಡಿಟ್ ಸಹಕಾರಿ ಸಂಘ ಅಧ್ಯಕ್ಷ ಸುಧಾಕರ ಶೆಟ್ಟಿ ಆವರ್ಸೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಮೋಹನದಾಸ್ ಶೆಣೈ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಂ. ಮಹೇಶ್” ಹೆಗ್ಡೆ ಗಿಳಿಯಾರು ಕುಶಲ ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ. ಉದಯಕುಮಾರ್ ಹೆಗ್ಡೆ ಭಾಗವಹಿಸಲಿದ್ದಾರೆ
ಉಪಾಧ್ಯಕ್ಷ ಸೀತಾರಾಮ ಶೆಟ್ಟಿ ಕೆದೂರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಪತ್ ಕುಮಾರ್ ಶೆಟ್ಟಿ ಆರ್ಡಿ, ನಿರ್ದೇಶಕರಾಗಿ ಸಂಜೀವ್ ಶೆಟ್ಟಿ ಸಂಪಿಗೇಡಿ, ಸಂಪತ್ ಕುಮಾರ್ ಶೆಟ್ಟಿ ಕಾವ್ರಾಡಿ, ಅಶೋಕ್ ಕುಮಾರ್ ಶೆಟ್ಟಿ ಸಂಸಾಡಿ. ಕೆ. ರಮೇಶ್ ಶೆಟ್ಟಿ ಗುಲ್ವಾಡಿ, ಸೀತಾರಾಮ ಶೆಟ್ಟಿ ಕೆದೂರು, ಕಿರಣ್ ಹೆಗ್ಡೆ ಅಂಪಾರು, ಸುಪ್ರೀತಾ ದೀಪಕ್ ಕುಮಾರ್ ಶೆಟ್ಟಿ ವಿಕಾಸ್’ ಹೆಗ್ಡೆ ಕೊಳೆರೆ, ಆನಂದ್ ಶೆಟ್ಟಿ ಆವರ್ಸೆ, ಪ್ರಕಾಶ್ ಚಂದ್ರ ಶೆಟ್ಟಿ ಚಿತ್ತೂರು, ಸುನಿಲ್ ಕುಮಾರ್ ಶೆಟ್ಟಿ ಹೇರಿಕುದ್ರು, ಉದಯ ಕುಮಾರ್ ಶೆಟ್ಟಿ ಮಚ್ಚಟ್ಟು ಭಾಗವಹಿಸಲಿದ್ದಾರೆ