ಬಸ್ರೂರು : ಬಸ್ರೂರು ಸಮೀಪದ ಮಾರ್ಗೋಳಿಯಲ್ಲಿ ನೂತನವಾಗಿ ಉದ್ಘಾಟನೆಗೊಂಡ ಶ್ರೀ ಬ್ರಹ್ಮಲಿಂಗೇಶ್ವರ ಕಾಂಪ್ಲೆಕ್ಸ್‌ನಲ್ಲಿ ಕುಂದಾಪುರದ ಮಿತ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಬಸ್ರೂರು ಶಾಖೆಯ ಉದ್ಘಾಟನಾ ಸಮಾರಂಭವು ನೆರವೇರಿತು
ಬಸ್ರೂರು ಶಾಖೆಯನ್ನು ಉದ್ಘಾಟಿಸಿದ ವಿಶ್ವ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಹಾಗೂ ಗುತ್ತಿಗೆದಾರ ಎಚ್.ಶಶಿಧರ ನಾಯ್ಕ್ ಮಾತನಾಡಿ, ಈಗಾಗಲೇ ಲಾಭದಲ್ಲಿ ನಡೆಯುತ್ತಿರುವ ಕುಂದಾಪುರದ ಮಿತ್ರ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘವು ಬಸ್ರೂರು ಶಾಖೆಯಿಂದ ಮತ್ತಷ್ಟು ಲಾಭಗಳಿಸಿ ಇನ್ನೂ ಹಲವಾರು ಶಾಖೆ ತೆರೆಯುವಂತಾಗಲಿ. ದೊಡ್ಡ ಮೊತ್ತದ ಬಂಡವಾಳ ಹೊಂದಿರುವ ಮಿತ್ರ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕಾರ್ಯನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಶುಭ ಹಾರೈಸಿದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಿತ್ರ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಾಧಾಕೃಷ್ಣ ಯು. ಮಾತನಾಡಿ, ಸಂಘದ ಲಾಭದ ಹಣದಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ ಬಗ್ಗೆ ಸಂತೃಪ್ತಿಯಿದೆ. ಗ್ರಾಹಕರ ಸಹಕಾರ ಇದೇ ರೀತಿ ಮುಂದುವರಿಯಲಿ ಎಂದು ಆಶಿಸಿದರು
ಸಂಘದ ಕಚೇರಿಯ ಭದ್ರತಾ ಕೊಠಡಿಯನ್ನು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಉದ್ಘಾಟಿಸಿ, ಶುಭ ಹಾರೈಸಿದರು. ಗಣಕಯಂತ್ರವನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಮಂಜುನಾಥ ಕೆ.ಎಸ್.ಉದ್ಘಾಟಿಸಿದರು.
ಬಸೂರು ಮಾರ್ಗೊಳಿಯ ಶ್ರೀ ಬ್ರಹ್ಮಲಿಂಗೇಶ್ವರ ಕಾಂಪ್ಲೆಕ್ಸ್‌ನ ಮಾಲಕ ನಾಗರಾಜ ಶೆಟ್ಟಿ ಮಂಜು ಶಾಮಿಯಾನದ ಮಾಲಕ ಮಧುಕರ ಪೂಜಾರಿ, ಸಂಘದ ಉಪಾಧ್ಯಕ್ಷ ರಮೇಶ್ ದೇವಾಡಿಗ, ನಿರ್ದೇಶಕರಾದ ಶ್ರೀನಿವಾಸ, ಸುರೇಂದ್ರ ಕೆ ವಿಜಯ ಪೂಜಾರಿ, ಕೃಷ್ಣ ಪೂಜಾರಿ, ಶ್ರೀ ಎಚ್.ಜನಾರ್ಧನ ರಾವ್, ವಾಸುದೇವ ಹಂದೆ, ರಾಜಶೇಖರ ಹೆಗ್ಡೆ, ಶುಭವಾಣಿ, ಮಾಲತಿ ಮತ್ತು ವರುಣ್ ರಾಘವೇಂದ್ರ ಗೋಟ ಮುಂತಾದವರು ಉಪಸ್ಥಿತರಿದ್ದರು
ಗೋಪಾಲ ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

