ಕುಂದಾಪುರ: ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಅವರ ಪ್ರತಿಭೆ, ಅಭಿರುಚಿ, ಆಸಕ್ತಿಗೆ ಅನುಗುಣವಾಗಿ ಬೆಳೆಸಿ ದೇಶದ ಆಸ್ತಿಯನ್ನಾಗಿಸಬೇಕು. ಸಾಮಾನ್ಯ ತಾಯಿಯೂ ಕೂಡ ಮಕ್ಕಳನ್ನು ಅಸಾಮಾನ್ಯ ವ್ಯಕ್ತಿಯನ್ನಾಗಿ ಬೆಳೆಸುವ ಶಕ್ತಿ ಹೊಂದಿರುತ್ತಾಳೆ. ಮಕ್ಕಳ ವರ್ತನೆ ಮನೆಯವರನ್ನು ಅವಲಂಬಿಸಿರುತ್ತದೆ. ಆದುದರಿಂದ ವಿದ್ಯಾರ್ಥಿಗಳ ಬದುಕಿನಲ್ಲಿ ಪೋಷಕರ ಪಾತ್ರ ಮಹತ್ವಪೂರ್ಣವಾದದ್ದು ಎಂದು ಶ್ರೀ ಶ್ರೀನಿವಾಸ ಜೋಗಿ ನುಡಿದರು
ರಾಮ್ಸನ್ ಸರ್ಕಾರಿ ಪ್ರೌಢಶಾಲೆ ಕಂಡ್ಲೂರು ಇಲ್ಲಿ ಶ್ರೀ ಸಾಮ್ರಾಟ್ ಶೆಟ್ಟಿ, ಗೌರವಾಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಇವರ ಅಧ್ಯಕ್ಷತೆಯಲ್ಲಿ ದಿ| ನರಸಿಂಹ ಜೋಗಿ ಕಂಡ್ಲೂರು ಹಾಗೂ ದಿ| ಗಿರಿಜಾ ನರಸಿಂಹ ಜೋಗಿ ಇವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ನೆರವೇರಿತು. ಅವರ ಸುಪುತ್ರರಾದ ಶ್ರೀ ಚಂದ್ರಶೇಖರ ಜೋಗಿ, ಶ್ರೀ ಶ್ರೀನಿವಾಸ ಜೋಗಿ ಹಾಗೂ ಶ್ರೀ ರಾಜಶೇಖರ ಜೋಗಿ ಸಹೋದರರು ಕಳೆದ ವರ್ಷ 1 ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ನೋಟ್ ಪುಸ್ತಕಗಳನ್ನು ನೀಡಿ ಈ ಬಾರಿಯೂ ಕೂಡ 1 ಲಕ್ಷ ರೂಪಾಯಿಗೂ ಮಿಕ್ಕಿ ಪುಸ್ತಕಗಳನ್ನು ಉಚಿತವಾಗಿ ನೀಡಿ, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ನೀಡಿ ಅಭಿನಂದಿಸಲಾಗುವುದು ಎಂದು ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆ ಪ್ರೋತ್ಸಾಹ ನೀಡಿದರು.
ಈ ಬಾರಿ ಸಂಸ್ಥೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ಪಡೆದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರ ನಿರಂತರ ಸಹಾಯ ಸಹಕಾರಕ್ಕೆ ಸಂಸ್ಥೆ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಚಂದ್ರಶೇಖರ ಜೋಗಿ ಆಡಳಿತ ಧರ್ಮದರ್ಶಿಗಳು ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಕಂಡ್ಲೂರು, ಶ್ರೀ ಶ್ರೀನಿವಾಸ ಜೋಗಿ ಮಾಲಕರು ಭವಾನಿ ಕಂಗನ್ ಸ್ಟೋರ್ಸ್ ಬೆಂಗಳೂರು, ಶ್ರೀ ವಿಜಯ ಪುತ್ರನ್ ಅಧ್ಯಕ್ಷರು ಗ್ರಾಮ ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪ್ರಕಾಶ್ ಚಂದ್ರ ಶೆಟ್ಟಿ., ಶ್ರೀ ಶಿವ ಮೊಗವೀರ, ಶ್ರೀ ಸುರೇಶ್ ಭಟ್ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.
ಶಿಕ್ಷಕರಾದ ಗೋಪಾಲ್ ವಿಷ್ಣು ಭಟ್, ಅಜಯ್ ಕುಮಾರ್ ಶೆಟ್ಟಿ, ನಿತ್ಯಾನಂದ ಶೆಟ್ಟಿ ಹಳ್ನಾಡು, ಶ್ರೀಮತಿ ರತ್ನ, ಶ್ರೀ ಅಣ್ಣಪ್ಪ ಗೌಡ, ಪ್ರತಿಮಾ ಕೃಷ್ಣ ಗೌಡ, ಲಕ್ಷ್ಮೀ ಶೆಟ್ಟಿ, ಎಲ್ಲಾ ಪೋಷಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಶ್ರೀ ಸುರೇಶ್ ಭಟ್ ಸ್ವಾಗತಿಸಿ, ಶ್ರೀಮತಿ ರಜನಿ ಎಸ್. ವಂದಿಸಿದರು