Home » 1 ಲಕ್ಷ ಅನುದಾನ ಮೊತ್ತದ ಮಂಜೂರಾತಿ ಪತ್ರ ಹಸ್ತಾಂತರ
 

1 ಲಕ್ಷ ಅನುದಾನ ಮೊತ್ತದ ಮಂಜೂರಾತಿ ಪತ್ರ ಹಸ್ತಾಂತರ

by Kundapur Xpress
Spread the love

ಕೋಟ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬ್ರಹ್ಮಾವರ ತಾಲೂಕು ಕೋಟವಲಯದಲ್ಲಿ ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡ ವಿಸ್ತರಣೆಗೆ ಶ್ರೀ ಕ್ಷೇತ್ರದಿಂದ ಮಂಜೂರಾದ 1 ಲಕ್ಷ ರೂ ಅನುದಾನ ಮೊತ್ತದ ಮಂಜೂರಾತಿ ಪತ್ರವನ್ನು ಇತ್ತೀಚಿಗೆ ಸಾಲಿಗ್ರಾಮದಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬ್ರಹ್ಮಾವರ ತಾಲೂಕು ಯೋಜನಾಧಿಕಾರಿಗಳಾದ ರಮೇಶ್ ಪಿ.ಕೆ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಗಾಣಿಗ, ಸಹಕಾರಿ ಸಂಘದ ನಿರ್ದೇಶಕರುಗಳು, ಕಾರ್ಯದರ್ಶಿ ಜ್ಯೋತಿ, ಜನಜಾಗೃತಿ ವಲಯಾಧ್ಯಕ್ಷರುಗಳಾದ ಅಚ್ಯುತ ಪೂಜಾರಿ, ಜಯರಾಮ್ ಶೆಟ್ಟಿ ,ಒಕ್ಕೂಟದ ಅಧ್ಯಕ್ಷರುಗಳಾದ ಕೃಷ್ಣಮೂರ್ತಿ ಮರಕಾಲ, ದಿನೇಶ್, ಜಗದೀಶ್, ವಲಯದ ಮೇಲ್ವಿಚಾರಕಿ ನೇತ್ರಾವತಿ, ಸೇವಾಪ್ರತಿನಿಧಿ ಶ್ಯಾಮಲ ಮತ್ತು ಅನುಸೂಯ ಉಪಸ್ಥಿತರಿದ್ದರು

 

Related Articles

error: Content is protected !!