Home » ರಿಕ್ಷಾದಲ್ಲಿ ಮರೆತ ಚಿನ್ನಾಭರಣಗಳಿದ್ದ ವ್ಯಾನಿಟಿ ಬ್ಯಾಗ್ : ಹಿಂತಿರುಗಿಸಿದರು ಪ್ರಾಮಾಣಿಕ ಆಟೋ ಚಾಲಕ
 

ರಿಕ್ಷಾದಲ್ಲಿ ಮರೆತ ಚಿನ್ನಾಭರಣಗಳಿದ್ದ ವ್ಯಾನಿಟಿ ಬ್ಯಾಗ್ : ಹಿಂತಿರುಗಿಸಿದರು ಪ್ರಾಮಾಣಿಕ ಆಟೋ ಚಾಲಕ

by Kundapur Xpress
Spread the love

ಮಂಗಳೂರು : ಲೋಲಿಟ್ಟ ಹಾಗೂ ಅವರ ಕುಟುಂಬದವರು ಮಲ್ಲಿಕಟ್ಟೆಯಿಂದ ಮೇರಿ ಹಿಲ್ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ,
ಚಿನ್ನಾಭರಣಗಳಿದ್ದ ವ್ಯಾನಿಟಿ ಬ್ಯಾಗ್ ಅನ್ನು ಆಟೋ ರಿಕ್ಷಾದಲ್ಲಿ ಮರೆತು ಬಿಟ್ಟಿದ್ದರು.

ಈ ಕುರಿತು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ತಕ್ಷಣವೇ, ಠಾಣೆಯ ಸಿಬ್ಬಂದಿಗಳು ತ್ವರಿತವಾಗಿ ಕಾರ್ಯಪ್ರವೃತ್ತರಾಗಿ, ಆಟೋ ರಿಕ್ಷಾ ಚಾಲಕ ರೋಷನ್ ಅವರ ಪ್ರಾಮಾಣಿಕ ಸಹಕಾರದಿಂದ ಸುಮಾರು ₹25 ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಅನ್ನು ಪತ್ತೆಹಚ್ಚಿ, ಪೊಲೀಸ್ ಉಪ ನಿರೀಕ್ಷಕರ ಸಮ್ಮುಖದಲ್ಲಿ ವಾರಸುದಾರರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು.

ಪ್ರಾಮಾಣಿಕ ಆಟೋ ಚಾಲಕ ರೋಷನ್ ಅವರಿಗೆ ಹಾಗೂ ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸ್ ಸಿಬ್ಬಂದಿಗಳಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ

 

Related Articles

error: Content is protected !!