Home » ಕಾಂಗ್ರೆಸ್‌ ಕಚೇರಿಗೆ ಸರಕಾರಿ ಜಾಗ ದುರ್ಬಳಕೆ ಆರೋಪ : ಇಂದು ಬಿಜೆಪಿಯಿಂದ ಪ್ರತಿಭಟನೆ
 

ಕಾಂಗ್ರೆಸ್‌ ಕಚೇರಿಗೆ ಸರಕಾರಿ ಜಾಗ ದುರ್ಬಳಕೆ ಆರೋಪ : ಇಂದು ಬಿಜೆಪಿಯಿಂದ ಪ್ರತಿಭಟನೆ

by Kundapur Xpress
Spread the love

ಕುಂದಾಪುರ : ಕಾಂಗ್ರೆಸ್ ಪಕ್ಷವು ಕುಂದಾಪುರದಲ್ಲಿ ಸರಕಾರಿ ಜಾಗ ದುರ್ಬಳಕೆ ಮಾಡಿ ಕಚೇರಿ ನಿರ್ಮಾಣಕ್ಕೆ ಮುಂದಾಗಿರುವುದಾಗಿ ಆರೋಪಿಸಿ ಕುಂದಾಪುರ ಬಿಜೆಪಿ ಮಂಡಲದ ನೇತೃತ್ವದಲ್ಲಿ ಮೇ 13ರ ಬೆಳಗ್ಗೆ 9.30 ಕ್ಕೆ ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿ ಪ್ರತಿಭಟನೆ ಹಮ್ಮಿಕೊಂಡಿದೆ.

ಸಂಸದ ಕೋಟ ಶ್ರೀನಿವಾಸ ಪೂಜಾರಿ,ಶಾಸಕ ಕಿರಣ್ ಕುಮಾರ್ ಕೊಡ್ಡಿ ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಪಕ್ಷದ ಮುಖಂಡರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ ಹಾಗೂ ಸುಧೀರ್‌ಕೆ. ಎಸ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ

 

Related Articles

error: Content is protected !!