ಬೆಂಗಳೂರು : ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿ ಹೂವಿನಹಡಗಲಿಯ ಹಿರೇಹಡಗಲಿ ಹಾಲಾಶ್ರೀ ಶ್ರೀಮಠದ ಅಭಿನವ ಹಾಲಾಶ್ರೀ ಸ್ವಾಮೀಜಿಯವರನ್ನು ವಿಚಾರಣೆ ಹಾಗೂ ಸ್ಥಳ ಪಂಚನಾಮೆಗೆ ಸಿಸಿಬಿ ಪೊಲೀಸ್ ಅಧಿಕಾರಿಗಳು ಮಠಕ್ಕೆ ಕರೆತಂದರು ಸಿಸಿಬಿ ಪೊಲೀಸ ಇನ್ಸ್ಪೆಕ್ಟರ್ ಚಂದ್ರಪ್ಪ ಬಾರ್ಗಿ ಅವರ ನೇತೃತ್ವದಲ್ಲಿ ತಂಡ ಸ್ವಾಮೀಜಿಯೊಂದಿಗೆ ಹಿರೇಹಡಗಲ್ಲಿ ಶ್ರೀಮಠಕ್ಕೆ ಆಗಮಿಸುತ್ತಿದ್ದಂತೆ ಸ್ವಾಮೀಜಿಯ ಸಂಬಂಧಿಕರು ಪೋಷಕರು ಶ್ರೀಮಠದ ಬಾಗಿಲು ಬಳಿ ಇಡುಗಾಯಿ ಒಡೆದು ಬರಮಾಡಿಕೊಂಡರು
ಅಧಿಕಾರಿಗಳ ತಂಡ ನೇರವಾಗಿ ಶ್ರೀಮಠದೊಳಗೆ ಪ್ರವೇಶಿಸಿ ಮಠದ ಬಾಗಿಲು ಹಾಕಿ ಸ್ವಾಮೀಜಿ ವಿಚಾರಣೆ ಮುಂದುವರೆಸಿದರು ಜೊತೆಗೆ ಸ್ವಾಮೀಜಿಯ ಕಾರು ಚಾಲಕ ಲಿಂಗರಾಜ್ ಅವರನ್ನು ಕರೆತಂದು ತಂಡ ಸ್ವಾಮೀಜಿ ಜೊತೆಗೆ ಅವರನ್ನು ವಿಚಾರಣೆಗೆ ಒಳಪಡಿಸಿದರು ಸುಮಾರು 3 ಗಂಟೆಗಳ ಕಾಲ ವಿಚಾರಣೆ ನಡೆಸಿದ ಸಿಸಿಬಿ ತಂಡ ಸ್ವಾಮೀಜಿ ವಾಸವಾಗಿರುವ ಮನೆ ತಪಾಸಣೆ ಮಾಡಿದರು
ಅಭಿನವ ಹಾಲಾಶ್ರೀ ಸ್ವಾಮೀಜಿಗಳು ಹೊಂದಿರುವ ಪೆಟ್ರೋಲ್ ಬಂಕ್ ಜಮೀನು ಈಗಾಗಲೇ ವಶಕ್ಕೆ ಪಡೆದಿರುವ ನಗದು ಹಣದ ಕುರಿತು ಅಧಿಕಾರಿಗಳು ವಿಚಾರಣೆ ನಡೆಸಿದರು ಎನ್ನುವ ಮಾಹಿತಿ ಲಭ್ಯವಾಗಿದೆ