Home » ಬೈಂದೂರಿನ ಉಪ್ಪುಂದದಲ್ಲಿ ನೂರಾರು ಮಂದಿ ಅಸ್ವಸ್ಥ
 

ಬೈಂದೂರಿನ ಉಪ್ಪುಂದದಲ್ಲಿ ನೂರಾರು ಮಂದಿ ಅಸ್ವಸ್ಥ

ಆಮೆಶಂಕೆ ಭೀತಿ

by Kundapur Xpress
Spread the love

ಬೈಂದೂರು : ಇಲ್ಲಿನ ಉಪ್ಪುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಲುಷಿತ ನೀರು ಸೇವನೆಯಿಂದ ನೂರಕ್ಕೂ ಅಧಿಕ ಮಂದಿ ಆಮಶಂಕೆ ಕಾಯಿಲೆಗೊಳಗಾಗಿದ್ದು, ಇದರಿಂದ ಇಡೀ ಪ್ರದೇಶದಲ್ಲಿ ಆತಂಕ ನಿರ್ಮಾಣವಾಗಿದೆ.

ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಕಿಹಳ್ಳಿ ಮತ್ತು ಮಡಿಕಲ್ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ಆಮಶಂಕೆ ಕಾಯಿಲೆ ಹರಡುತ್ತಿದ್ದು, ಇಲ್ಲಿನ ಪ್ರತಿ ಮನೆಯಲ್ಲಿ ಒಬ್ಬಿಬ್ಬರಿಗೆ ವಾಂತಿ ಬೇಧಿ ಕಂಡುಬಂದಿದೆ. ಆರೋಗ್ಯ ಇಲಾಖೆಯ ತಕ್ಷಣದ ಕ್ರಮದಿಂದ ಕಾಯಿಲೆ ಹತೋಟಿಗೆ ಬಂದಿದೆ ಎಂದು ತಿಳಿದುಬಂದಿದೆ

ಆಮಶಂಕೆ ಕಾಯಿಲೆಯು ಬ್ಯಾಕ್ಟಿರಿಯಾಗಳಿಂದ ಉಂಟಾಗುತ್ತದೆ ಮತ್ತು ನೀರಿನ ಮೂಲಕ ದೇಹವನ್ನು ಸೇರಿಕೊಂಡು ವಾಂತಿ ಬೇಧಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿಈ ವಾರ್ಡ್‌ಗಳಿಗೆ ಗ್ರಾ.ಪಂ.ನಿಂದ ಪೂರೈಸಲಾಗುತ್ತಿರುವ ಕಲುಷಿತ ನೀರಿನಿಂದಲೇ ಈ ಕಾಯಿಲೆ ಹರಡಿರುವುದು ಪತ್ತೆಯಾಗಿದೆ. ಉಪ್ಪುಂದ ಗ್ರಾ.ಪಂ.ಗೆ ಕಾಸನಹಾಡಿ ಎಂಬಲ್ಲಿನ ಬಾವಿಯಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು, ಈ ಬಾವಿಯ ನೀರಿನ ಮಾದರಿಯನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

2 ದಿನಗಳಿಂದ ಈ ವಾರ್ಡುಗಳಿಗೆ ಗ್ರಾ.ಪಂ. ವತಿಯಿಂದ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದ್ದು, ಕಾಯಿಲೆ ಹರಡುವುದು ಹತೋಟಿಗೆ ಬಂದಿದೆ. ಪ್ರಸ್ತುತ 80ರ ಒಬ್ಬ ವೃದ್ಧರೊಬ್ಬರು ಚಿಕಿತ್ಸೆ ಪಡೆಯುತ್ತಿದ್ದು, ಇತರರು ಚೇತರಿಸಿಕೊಂಡಿದ್ದಾರೆ 

   

Related Articles

error: Content is protected !!