ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವೈಭವದ ಸಹಸ್ರಾವರ್ತನ ಉಪನಿಷತ್ ಕಲಶಾಭಿಷೇಕ ಹಾಗೂ ಸಿಯಾಳ (ಎಳೆನೀರು) ಅಭಿಷೇಕ

by Kundapur Xpress
Spread the love

ಆನೆಗುಡ್ಡೆ: ‘ಕ್ಷಿಪ್ರ ಪ್ರಸಾದ ವಿನಾಯಕ’ ಎಂದು ಪ್ರಸಿದ್ಧಿ ಪಡೆದಿರುವ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಶ್ರಾವಣ ಮಾಸದ ಶುದ್ಧ ಹುಣ್ಣಿಮೆಯ ಪವಿತ್ರ ದಿನವಾದ ಶುಕ್ರವಾರ ಲೋಕಕಲ್ಯಾಣಾರ್ಥವಾಗಿ, ದೇಶದ ಅಭಿವೃದ್ಧಿ ಹಾಗೂ ಸಮಸ್ತ ಭಕ್ತರ ಕ್ಷೇಮಾಭಿವೃದ್ಧಿಗಾಗಿ ‘ಸಹಸ್ರಾವರ್ತನ ಉಪನಿಷತ್ ಕಲಶಾಭಿಷೇಕ’ ಹಾಗೂ ‘ಸಿಯಾಳ (ಎಳೆನೀರು) ಅಭಿಷೇಕ’ ಸೇವೆಯನ್ನು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ವೈಭವದಿಂದ ನೆರವೇರಿಸಲಾಯಿತು.

ಅರ್ಚಕರ ವೇದಘೋಷ, ಮಂತ್ರೋಚ್ಚಾರಣೆ ಹಾಗೂ ವಾದ್ಯಘೋಷಗಳ ನಡುವೆ ಶ್ರೀ ವಿನಾಯಕ ದೇವರಿಗೆ ಸಹಸ್ರಾವರ್ತನ ಉಪನಿಷತ್ ಮಂತ್ರಗಳ ಪಠಣದೊಂದಿಗೆ ವಿಶೇಷ ಸುವರ್ಣ ಕಲಶಾಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ಭಕ್ತಾದಿಗಳು ಪೂರ್ವಭಾವಿಯಾಗಿ ಸಮರ್ಪಿಸಿದ್ದ ನೂರಾರು ಸಿಯಾಳಗಳಿಂದ (ಎಳೆನೀರು) ಶ್ರೀ ದೇವರಿಗೆ ವಿಶೇಷ ಸುವರ್ಣ ಕಲಶದ ಮಹಾಭಿಷೇಕವನ್ನು ನೆರವೇರಿಸಿ, ವಿಶೇಷ ಅಲಂಕಾರ ಪೂಜೆ ಹಾಗೂ ಮಹಾಪೂಜೆಯನ್ನು ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಧರ್ಮದರ್ಶಿಗಳು, ಪರ್ಯಾಯ ಅರ್ಚಕರು, ದೇವಸ್ಥಾನದ ಸಿಬ್ಬಂದಿ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದು, ಧಾರ್ಮಿಕ ಕಾರ್ಯಕ್ರಮಗಳು ಸುಸೂತ್ರವಾಗಿ ನೆರವೇರಲು ಸಹಕರಿಸಿದರು.

ಭಕ್ತರ ಸಮ್ಮುಖದಲ್ಲಿ ಲೋಕಕಲ್ಯಾಣ, ದೇಶದ ಅಭಿವೃದ್ಧಿ ಹಾಗೂ ಸಮಸ್ತ ಭಕ್ತರ ಸುಖ-ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ಸಂಪನ್ನಗೊಂಡವು.

 

Related Articles

error: Content is protected !!