ಬಿ. ಬಿ. ಹೆಗ್ಡೆ ಕಾಲೇಜು: ಸದ್ಭಾವನಾ ದಿವಸ್

by Kundapur Xpress
Spread the love

ಕುಂದಾಪುರ : ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ I ಮತ್ತು II ರ ಆಶ್ರಯದಲ್ಲಿ ಆಗಸ್ಟ್ 20ರಂದು ಸದ್ಭಾವನಾ ದಿವಸ್‌ವನ್ನು ಕಾಲೇಜಿನ ಎ.ವಿ. ಹಾಲ್‌ನಲ್ಲಿ ನಡೆಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಅವರು ಮಾತನಾಡಿ, ದೇಶದ ಏಕತೆ, ಸಾಮರಸ್ಯ, ಸಹೋದರತ್ವ ಮತ್ತು ಪರಸ್ಪರ ಗೌರವವನ್ನು ಬೆಳೆಸುವಲ್ಲಿ ಯುವಜನರ ಪಾತ್ರ ಮಹತ್ವದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಶ್ರೀ ರಾಜೇಶ್ ಶೆಟ್ಟಿ ಹಾಗೂ ಪೂಜಾ ಕುಂದರ್ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಸ್ವಯಂಸೇವಕರು ದೇಶದ ಏಕತೆ, ಶಾಂತಿ, ಸೌಹಾರ್ದತೆ ಹಾಗೂ ಕೋಮು ಸಾಮರಸ್ಯವನ್ನು ಕಾಪಾಡುವ ಸಂಕಲ್ಪದೊ0ದಿಗೆ ಸದ್ಭಾವನ ದಿವಸದ ಭಾಗವಾಗಿ ಎನ್.ಎಸ್.ಎಸ್. ಸ್ವಯಂಸೇವಕರಿಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಸ್ವಯಂಸೇವಕ ಪ್ರತಿನಿಧಿ ಪ್ರತೀಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಏಕತೆ, ಸಹಬಾಳ್ವೆ ಮತ್ತು ಸದ್ಭಾವನೆಯ ಮಹತ್ವವನ್ನು ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾಯಿತು.

 

Related Articles

error: Content is protected !!