ಕೋಟ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಕುಂದಾಪುರ ತಾಲೂಕಿನ ತೆಕ್ಕಟ್ಟೆ ವಲಯದ ಬೇಳೂರು.ಬಿ ಒಕ್ಕೂಟದ ಮಾಸಾಶನ ವಿತರಣಾ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಫಲಾನುಭವಿಯಾದ ಬೇಳೂರು ಬಡಾಬೆಟ್ಟು ಸೋಮು ಪೂಜಾರಿಯವರಿಗೆ ವಾಸ್ತಲ್ಯ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಕಿಟ್‌ನ್ನು ತಾಲೂಕಿನ ಯೋಜನಾಧಿಕಾರಿಯವರಾದ ನಾರಾಯಣ ಪಾಲನ್ ವಿತರಿಸಿದರು. ಈ ಸಂದರ್ಭದಲ್ಲಿ ತೆಕ್ಕಟ್ಟೆ ವಲಯದ ವಲಯ ಅಧ್ಯಕ್ಷ ಹಾಗೂ ಬೇಳೂರು ಬಿ ಒಕ್ಕೂಟದ ಅಧ್ಯಕ್ಷ ಸುಕುಮಾರ್ ಶೆಟ್ಟಿ,ತಾಲೂಕಿನ ಮಹಿಳಾ ಜ್ಞಾನವಿಕಾಸ ಸಮನ್ವಯಧಿಕಾರಿಯವರಾದ ಕವಿತಾ ತೆಕ್ಕಟ್ಟೆ ವಲಯದ ಮೇಲ್ವಿಚಾರಕರಾದ ರಾಧಿಕಾ ಹಾಗೂ ಕುಂದಾಪುರ ೨ ತಾಲೂಕಿನ ಕಚೇರಿ ಸಹಾಯಕ ಪ್ರಬಂಧಕರಾದ ವಂದನಾ , ಬೇಳೂರು,ಬಿ ಒಕ್ಕೂಟದ ಸೇವಾ ಪ್ರತಿನಿಧಿ ಉಷಾ ಮತ್ತು ಸ್ಥಳೀಯ ಸದಸ್ಯರಾದ ಶರತ,ನಾಗು.ಬುಡ್ಡು, ಸಾಕು ಮತ್ತಿತರರು ಉಪಸ್ಥಿತರಿದ್ದರು.