ಬ್ರಹ್ಮಾವರ: ಮನೆಗೆ ನುಗ್ಗಿ ಗರ್ಭಿಣಿಗೆ ಹಲ್ಲೆ : ಜೀವ ಬೆದರಿಕೆ ಆರೋಪ

by Kundapur Xpress
Spread the love

ಬ್ರಹ್ಮಾವರ: ಕಾಡೂರು ಗ್ರಾಮದ ವೀಣಾ (32) ಎಂಬ ಗರ್ಭಿಣಿಯ ಮನೆಗೆ ಬಂದು ಹಲ್ಲೆ ನಡೆಸಿ, ಮನೆಯ ಸಿಸಿಟಿವಿ ಕ್ಯಾಮೆರಾ ಹಾಗೂ ಕಿಟಕಿ ಗಾಜು ಹಾನಿಗೊಳಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಸ್ಟ್ 23ರಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 12 ಗಂಟೆಯೊಳಗೆ ನಾಲ್ವರು ಅಪರಿಚಿತ ವ್ಯಕ್ತಿಗಳು ಹಾಗೂ ಶ್ಯಾಮ ನಾಯ್ಕ, ನಂದಕಿಶೋರ, ರಾಜೇಶ ನಾಯ್ಕ, ಕೃಷ್ಣ ನಾಯ್ಕ, ವಸಂತಿ, ಬಾಬಿ, ಸುಮತಿ, ವಂದನ ಸೇರಿದಂತೆ ಕೆಲವರು ಪಿಣಿಯ ನಾಯ್ಕರವರ ಪಿತೂರಿ ಮೇರೆಗೆ ಮನೆಗೆ ಬಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಗರ್ಭಿಣಿಯಾಗಿದ್ದ ವೀಣಾ ಅವರಿಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಮನೆಯ ಸಿಸಿಟಿವಿ ಕ್ಯಾಮೆರಾ ಹಾಗೂ ಕಿಟಕಿ ಗಾಜನ್ನು ಹಾನಿಗೊಳಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಇದೇ ವೇಳೆ ವೀಣಾ ಅವರ ಮೈದುನನ ಪತ್ನಿ ಚಂದ್ರಾವತಿ ಅವರ ಮೇಲೂ ಕಲ್ಲು ಹಾಗೂ ಎಳನೀರು ಸಿಪ್ಪೆಯಿಂದ ಹಲ್ಲೆ ನಡೆಸಿದ್ದು, ಮನೆಯ ಸಾಕು ನಾಯಿಗೂ ಹೊಡೆದು ಆರೋಪಿಗಳು ವಾಹನಗಳಲ್ಲಿ ತೆರಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Related Articles

error: Content is protected !!