ಕುಂದಾಪುರ : ಡಾ ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಹಾಗೂ ಗಣಕ ವಿಜ್ಞಾನ ವಿಭಾಗದ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ “ಶ್ರೀ ಕೃಷ್ಣನ ಕುರಿತು ರಂಗೋಲಿ “ಸ್ಪರ್ಧೆಯಲ್ಲಿ 35 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಕೃಷ್ಣನ ಬಾಲ ಲೀಲೆ, ಕಾಳಿಂಗ ಮರ್ಧನ, ಮುರಾರಿ, ಬಾಲಕೃಷ್ಣನ ಕುರಿತು ಕೃಷ್ಣನ ವಿಭಿನ್ನ ರೂಪಗಳನ್ನು ರಂಗೋಲಿಯ ಮೂಲಕ ಚಿತ್ರಿಸಿದರು.
ಕಾರ್ಯಕ್ರಮದಲ್ಲಿ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಕಾಲೇಜಿನ ಆಡಳಿತ ನಿಕಾಯಕರು ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಅಧಿಕಾರಿ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀ ಮಹೇಶ್ ಕುಮಾರ್, ಇತರ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಸ್ಪರ್ಧೆಯಲ್ಲಿ ಶ್ರಮಿತ ಮತ್ತು ಗೌತಮಿ, ತೃತೀಯ ಬಿ.ಕಾಂ ‘ಇ’ ಪ್ರಥಮ ಬಹುಮಾನ, ಸೌಜನ್ಯ ಮತ್ತು ಮಾನ್ಯ ದ್ವಿತೀಯ ಬಿಸಿಎ ‘ಬಿ’ ದ್ವಿತೀಯ ಬಹುಮಾನವನ್ನು ಗಳಿಸಿದರು. ಗಣಕಶಾಸ್ತ್ರ ಪ್ರಾಧ್ಯಾಪಕ ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ. ವಿಜಯಶ್ರೀ ‘ಎ’ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

