160
ಉಡುಪಿ : ಉಡುಪಿಯ ಕೃಷ್ಣ ಮಠದಲ್ಲಿ ಬುಧವಾರ ಉತ್ಪಾನ ದ್ವಾದಶಿ ಪ್ರಯುಕ್ತ ತುಳಸೀಪೂಜೆ, ಲಕ್ಷದಿಪೋತ್ಸವ ಮತ್ತು ರಥೋತ್ಸವ ಸಂಭ್ರಮದಿಂದ ನಡೆಯಿತು. ಮಧ್ಯಾಹ್ನ ರಥಬೀದಿಯಲ್ಲಿ ಲಕ್ಷದೀಪೋತ್ಸವಕ್ಕಾಗಿ ಹಣತೆಯನ್ನಿಡುವ ಕಾರ್ಯಕ್ಕೆ ಪರ್ಯಾಯ ಶ್ರೀ ಸುಗುಣೇಂದ್ರತೀರ್ಥರು ಚಾಲನೆ ನೀಡಿದರು. ಸಾಯಂಕಾಲ ನವಗ್ರಹ ಪೂಜೆ. ನವಗ್ರಹ ದಾನದ ಬಳಿಕ ರಥೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು
ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಯಿತು. ತುಳಸೀ ಪೂಜೆ, ಕ್ಷೀರಾಬ್ಬಿ ಪೂಜೆ ಪರ್ಯಾಯ ಶ್ರೀ ಸುಗುಣೇಂದ್ರತೀರ್ಥರು ಹಾಗೂ ಕಿರಿಯ ಶ್ರೀ ಸುಶೀಂದ್ರತೀರ್ಥರು ಮಠದ ಪ್ರಾಂಗಣದಲ್ಲಿರುವ ತುಳಸಿ ಕಟ್ಟೆಯಲ್ಲಿ ತುಳಸೀ ಪೂಜೆ ನೆರವೇರಿಸಿದರು. ಸಾಯಂಕಾಲ ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಕ್ಷೀರಾಬ್ಬಿ ಪೂಜೆ ನಡೆಯಿತು


