ಕುಂದಾಪುರ : ಭಂಡಾರ್ಕಾರ್ಸ್ ಕಾಲೇಜು, ಇದರ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ “ಸ್ವಚ್ಛತೆ, ಆರೋಗ್ಯ ಹಾಗೂ ಘನ ತ್ಯಾಜ್ಯ ವಿಲೇವಾರಿ” ಬಗ್ಗೆ ಅರಿವು ಕಾರ್ಯಕ್ರಮ ನೆರವೇರಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ ಗುರುಪ್ರಸಾದ್ ಶೆಟ್ಟಿ, ಪರಿಸರ ಅಭಿಯಂತರರು, ಪುರಸಭೆ ಕುಂದಾಪುರ ಇವರು ಅರೋಗ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡುವುದು ಹೇಗೆ ಮತ್ತು ತ್ಯಾಜ್ಯಗಳ ವಿಧಗಳು, ಅವುಗಳಿಂದ ನಮ್ಮ ಮೇಲೆ, ಪ್ರಾಣಿಗಳ ಮೇಲೆ, ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿ ಅವುಗಳ ವಿಲೇವಾರಿ ಹೇಗೆ ಆಗುತ್ತದೆ ಹಾಗೂ ಅವುಗಳ ವಿಲೇವಾರಿಯಲ್ಲಿ ನಮ್ಮ ಪಾತ್ರಗಳ ಬಗ್ಗೆ ವಿವರವಾಗಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುರಸಭೆಯ ಮುಖ್ಯಾಧಿಕಾರಿಗಳಾದ ಶ್ರೀ ಆನಂದ ಜೆ. ಇವರು ವಿದ್ಯಾರ್ಥಿಗಳಿಗೆ ತ್ಯಾಜ್ಯ ನಿರ್ವಹಣೆ ಪುರಸಭೆ ವತಿಯಿಂದ ಹೇಗೆ ಆಗುತ್ತದೆ ಹಾಗೂ ತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವಲ್ಲಿ ಏನ್ ಎಸ್ ಎಸ್ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾoಶುಪಾಲರಾದ ಡಾ. ಶುಭಕರಾಚಾರಿ ಇವರು ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ವಿದ್ಯಾರ್ಥಿಕ್ಷೇಮಪಾಲನಾಧಿಕಾರಿಗಳು ಹಾಗೂ ಐ ಕ್ಯು ಎ ಸಿ ಸಂಯೋಜನಾಧಿಕಾರಿಗಳಾದ ಪ್ರೊ ಸತ್ಯನಾರಾಯಣ ಹತ್ವಾರ್, ಏನ್ ಎಸ್ ಎಸ್ ಯೋಜನಾಧಿಕಾರಿಗಳಾದ ಶ್ರೀ ಅರುಣ್ ಏ ಎಸ್,ಶ್ರೀ ರಾಮಚಂದ್ರ ಆಚಾರ್ ಹಾಗೂ ಉಪನ್ಯಾಸಕವೃಂದದವರು ಉಪಸ್ಥಿತರಿದ್ದರು.ಸ್ವಯಂಸೇವಕರಾದ ಕುಮಾರಿ ದೇವಿಕಾ ಸ್ವಾಗತಿಸಿದರು, ಪವನ್ ಶೆಟ್ಟಿ ವಂದಿಸಿದರು ಹಾಗೂ ಕುಮಾರಿ ಸಮೀಕ್ಷಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.