ಉಡುಪಿ :ಮೋಸ ಜಾಲದ ಗ್ಯಾರಂಟಿ ಕಾರ್ಡ್ ಗಳನ್ನು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮನೆ ಮನೆಗೆ ಹಂಚಿ ಮತದಾರರ ದಾರಿ ತಪ್ಪಿಸಿ, ಉಚಿತ ಖಚಿತ ಖಂಡಿತ ನಿಶ್ಚಿತ ಎಂದು ಬೊಬ್ಬಿರಿದ ಕಾಂಗ್ರೆಸ್ ಮುಖಂಡರು ಇದೀಗ 5 ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸಲಾಗದೆ ನಿದ್ದೆ ಬಿಟ್ಟು ತೊಳಲಾಡುವ ಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಲೇವಡಿ ಮಾಡಿದ್ದಾರೆ.
ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ 5 ಗ್ಯಾರಂಟಿಗಳನ್ನು ಯಾವುದೇ ಷರತ್ತು ಇಲ್ಲದೆ ಜಾರಿ ಮಾಡುತ್ತೇವೆ ಎಂದು ಪುಂಗಿ ಊದುತ್ತಾ ಬಂದಿರುವ ಕಾಂಗ್ರೆಸ್ ಮುಖಂಡರು ಇದೀಗ ಭಿನ್ನರಾಗ ಎಳೆಯುತ್ತಿರುವುದು ಸಂಶಯಕ್ಕೆಡೆಮಾಡಿದೆ.
ಕಾಂಗ್ರೆಸ್ ಪ್ರಾಯಶ: ತಾವು ಖಂಡಿತವಾಗಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಖಾತರಿಯಿಂದ ಬೇಕಾಬಿಟ್ಟಿ ಉಚಿತಗಳ ಗ್ಯಾರಂಟಿಗಳನ್ನು ಘೋಷಿಸಿರಬೇಕು ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.