ಕುಂದಾಪುರ: ಇಲ್ಲಿನ ಪಂಚ ಗಂಗಾವಳಿ ನದಿಯಲ್ಲಿ ಚಿಪ್ಪು ಸಂಗ್ರಹಿಸುತ್ತಿದ್ದ ವೆಂಕಟೇಶ ಖಾರ್ವಿ ಅವರಿಗೆ ಸೇರಿದ ಜೈಬಾಲಾಜಿ ಹೆಸರಿನ ಹಾಯಿ ದೋಣಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭಾನುವಾರ ಬೆಳಗ್ಗೆ ಪಯಣ ಬೆಳೆಸಿದೆ ದೋಣಿ ಪ್ರಯಾಣಕ್ಕೆ ಪುರಸಭ ಮಾಜಿ ಉಪಾಧ್ಯಕ್ಷರಾದ ಸಂದೀಪ್ ಖಾರ್ವಿಯವರು ಭಗವಾಧ್ವಜ ತೋರಿಸುವ ಮೂಲಕ ಪ್ರಯಾಣಕ್ಕೆ ಚಾಲನೆ ನೀಡಿದರು
ಕೊಂಕಣಿ ಖಾರ್ವಿ ಸಮಾಜದ ಶ್ರಮದ ಬದುಕಿಗೆ ಹಾಗೂ ಸಮಾಜದ ಸಂಸ್ಕೃತಿಯ ಪ್ರತೀಕವಾಗಿರುವ ಚಿಪ್ಪು ಸಂಗ್ರಹಿಸುವ ದೋಣಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ವಸ್ತು ಸಂಗ್ರಹಾಲಯ ಸೇರಲಿದೆ.ಕೊಂಕಣಿ ಖಾರ್ವಿ ಸಮಾಜದ ಆರಾಧ್ಯ ಕ್ಷೇತ್ರ ಖಾರ್ವಿಕೇರಿ ಮಹಾಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಫೆರ್ರಿ ರಸ್ತೆಯಲ್ಲಿ ಇಡಲಾಗಿದ್ದ ದೋಣಿಗೆ ಅರ್ಚಕರು ಮತ್ತು ಸಮಾಜ ಬಾಂಧವರಿಂದ ಶಾಸ್ರೋಕ್ತ ವಿಧಿವಿಧಾನ ನೆರವೇರಿಸಿ ಬೀಳ್ಕೊಟ್ಟರು.