Home » ಬಸ್ರೂರಿನಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಕಾಂಪ್ಲೆಕ್ಸ್‌ ಉದ್ಘಾಟನೆ
 

ಬಸ್ರೂರಿನಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಕಾಂಪ್ಲೆಕ್ಸ್‌ ಉದ್ಘಾಟನೆ

by Kundapur Xpress
Spread the love

ಬಸ್ರೂರು : ಸಮೀಪದ ಮಾರ್ಗೋಳಿಯ ರಾಜ್ಯ ಹೆದ್ದಾರಿಯ ಬಳಿಯಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಕಾಂಪ್ಲೆಕ್ಸ್ ಹಾಗೂ ಎಂ.ಎನ್. ಶೆಟ್ಟಿ ಹಾಲ್ ಅನ್ನು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿದರು ಗ್ರಾಮೀಣಭಾಗದಲ್ಲೂ ಇಂತಹ ಸುಸಜ್ಜಿತ ಹವಾನಿಯಂತ್ರಿತ ಸಭಾಭವನ ಹಾಗೂ ಕಾಂಪ್ಲೆಕ್ಸ್ ನಿರ್ಮಿಸಿರುವುದು ಶ್ಲಾಘನೀಯವಾಗಿದ್ದು ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆಯನ್ನರಳಿಸುವ  ಕಲೆ, ಸಂಗೀತ, ಸಾಹಿತ್ಯದಂತಹ ಕಾರ್ಯಕ್ರಮಗಳಿಗೆ ಇದು ಹೆಚ್ಚು ನೆರವಾಗಲಿ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ನುಡಿದರು

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಡಿ ಮಾತನಾಡಿ ಈ ಸಂಕೀರ್ಣದಲ್ಲಿ ಹಲವು ಕಚೇರಿಗಳು ಕಾರ್ಯನಿರ್ವಹಿಸಲಿದ್ದು ಸಾರ್ವಜನಿಕರಿಗೆ ಇದು  ಸಹಕಾರಿಯಾಗಲಿದೆ ಎಂದರು

ಬಸ್ರೂರು ಗ್ರಾ.ಪಂ.ಅಧ್ಯಕ್ಷ ಬೇಳೂರು ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಲಕ ನಾಗರಾಜ ಶೆಟ್ಟಿ ದಂಪತಿ, ಎಂಜಿನಿಯರ್ ಗಣೇಶ್ ಶೆಟ್ಟಿಬಸ್ರೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚಂದ್ರ ಬಿಲ್ಲವ ಉಪಸ್ಥಿತರಿದ್ದರು.

ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ದಿನಕರ ಹೆಗ್ಡೆ ಸ್ವಾಗತಿಸಿ ಕ್ಷೇತ್ರ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಸಂತೋಷ್‌ ಕುಮಾರ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

 

Related Articles

error: Content is protected !!