ಕನಿಷ್ಠ ವೇತನ ಕುರಿತಾಗಿ ಸರಕಾರ ಹೊರಡಿಸಿದ ಆದೇಶವನ್ನು ಶೀಘ್ರ ಅನುಷ್ಠಾನ ಮಾಡಲು ಸದನದಲ್ಲಿ ಪ್ರಸ್ತಾಪ.
ಕನಿಷ್ಠ ವೇತನ ಪರಿಷ್ಕರಣೆ ಸರಕಾರಿ ಆದೇಶ ಮರು ಪರಿಶೀಲನೆಗೆ 18-08-2026 ರಂತೆ ಸಚಿವ ಸಂಪುಟದ ಉಪ ಸಮಿತಿ ರಚಿಸಿದ್ದು, ಸದರಿ ಸಮಿತಿಯ ಅಂತಿಮ ತೀರ್ಮಾನದ ನಂತರ ಮುಂದಿನ ಕ್ರಮವೆಂದ ಸರಕಾರ
ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಮ ಳೆಗಾಲದ ಅಧಿವೇಶನದಲ್ಲಿ ರಾಜ್ಯದಲ್ಲಿ ರಾಜ್ಯದಲ್ಲಿ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡುವ ಸಂಬಂಧ ಈಗಾಗಲೇ ಸರಕಾರ ಮೇ ತಿಂಗಳಿನಲ್ಲಿ ಹೊರಡಿಸಲಾದ ಸರಕಾರಿ ಆದೇಶವನ್ನು ಅನುಷ್ಠಾನಗೊಳಿಸಲು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸರಾದ ಶ್ರೀ ಗುರುರಾಜ್ ಗಂಟಿ ಹೊಳೆಯವರು ಕೇಳಿದ ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿದ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರು ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಲಾದ ಅಧಿಸೂಚನೆ ಸಂಖ್ಯೆ : ಕಾಇ 411 ಎಲ್ ಡಬ್ಲ್ಯೂ ಎ 2023 ನ್ನು ದಿನಾಂಕ : 22-05-2026 ಕ್ಕೆ ಸಂಬಂಧಿಸಿದಂತೆ ದಿನಾಂಕ 13- 8 -2018 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರವು ವೇತನ ಸಂಹಿತೆ ಜಾರಿಗೆ ತಂದ ನಂತರ ರಾಜ್ಯ ಕಾರ್ಮಿಕ ಇಲಾಖೆಯು ಕನಿಷ್ಠ ವೇತನ ದರಗಳ ಪರಿಷ್ಕರಣೆ ಕುರಿತು ದಿನಾಂಕ 22-5-2026 ರಂದು ಅಧಿ ಸೂಚನೆ ಹೊರಡಿಸಿರುವುದರಿಂದ ಅದರಲ್ಲಿನ ಅಂಶಗಳು ಕೇಂದ್ರ ಸರ್ಕಾರದ ಸಂಹಿತೆಗೆ ಅನುಗುಣವಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಲು ಮಾನ್ಯ ಉಪ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ.ಇದರ ಅನ್ವಯ ಅಧಿಕೃತ ಜ್ಞಾಪನ ಸಂಖ್ಯೆ ಸ ಸಂಶಾ 06 ಸಿಎಸ್ ಸಿ 2026 ದಿನಾಂಕ 18-08- 2026 ರಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ ಸಚಿವ ಸಂಪುಟದ ಉಪ ಸಮಿತಿಯ ಅಂತಿಮ ತೀರ್ಮಾನದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ

