Home » ಗಾಳಿಮಳೆಗೆ ಮರ ಬಿದ್ದು ಮನೆಗೆ ಹಾನಿ
 

ಗಾಳಿಮಳೆಗೆ ಮರ ಬಿದ್ದು ಮನೆಗೆ ಹಾನಿ

ಶಾಸಕ ಗುರುರಾಜ ಗಂಟಿಹೊಳೆ ಭೇಟಿ

by Kundapur Xpress
Spread the love

ಸಿದ್ದಾಪುರ: ಇತ್ತೀಚಿಗೆ ಸುರಿದ ಗಾಳಿಮಳೆಯಿಂದಾಗಿ ಹೊಸಂಗಡಿ ಗ್ರಾಮದ ಹೊಳೆಶಂಕರನಾರಾಣ ವ್ಯಾಪ್ತಿಯ ಮನೆಯೊಂದರ ಮೇಲೆ ಮರ ಬಿದ್ದು ಮನೆಯೆ ಮೇಲ್ಛಾವಣಿಗೆ ಸಂಪೂರ್ಣ ಹಾನಿಯುಂಟಾಗಿದ್ದು, ಬೈಂದೂರು ಕ್ಷೇತ್ರದ  ಶಾಸಕರಾದ ಗುರುರಾಜ ಗಂಟಿಹೊಳೆಯವರು ಆ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಮರ ಬಿದ್ದು ಹಾನಿಯಾಗುವ ಮನೆಯ ಭಾಗವನ್ನು ಸಂಪೂರ್ಣವಾಗಿ ಪರಿಶೀಲಿಸಿದರು

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರವಾಗಿ ಚುನಾವಣೆ ಪ್ರಚಾರದಲ್ಲಿ ತಲ್ಲೀನರಾಗಿದ್ದ ಶಾಸಕರಾದ ಗುರುರಾಜ ಗಂಟಿಹೊಳೆ ಅವರಿಗೆ ಸಿದ್ದಾಪುರ, ಹೊಸಂಗಡಿ ಭಾಗದ ಕಾರ್ಯಕರ್ತರು ಮನೆ ಮೇಲೆ ಮರ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ ಕೂಡಲೇ ಬುಧವಾರ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಮರದ್ದ ಮನೆಯು ಸಂಪೂರ್ಣ ಹಾನಿಯಾಗಿದ್ದು ಮಾತ್ರವಲ್ಲದೇ ಮನೆಯ ಮೂವರಿಗೆ ಗಂಭೀರ ಗಾಯವೂ ಆಗಿದೆ. ಗಾಯಗೊಂಡಿರುವ ಮನೆಯ ಸದಸ್ಯರೊಂದಿಗೂ ಕೆಲಕಾಲ ಶಾಸಕರು ಮಾತನಾಡಿ ಅವರನ್ನು ಸಂತೈಸಿದ್ದಾರೆ

ಮಳೆ ಮತ್ತು ಗಾಳಿ ಜೋರಾಗಿ ಬಂದಿದ್ದರಿಂದ ಮರ ಕುಸಿದು ಮನೆಯ ಮೇಲೆ ಬಿದ್ದಿದೆ. ಮನೆಯ ಒಂದು ಭಾಗಕ್ಕೆ ಸಂಪೂರ್ಣ ಹಾನಿಯಾಗಿದೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಗರಿಷ್ಠ ಎಷ್ಟು ಪರಿಹಾರ ಒದಗಿಸಲು ಸಾಧ್ಯವೋ ಆ ಪ್ರಯತ್ನ ಮಾಡಲಾಗುವುದು. ಪಂಚಾಯತಿ, ತಹಶೀಲ್ದಾರ್ ಮೂಲಕ ಜಿಲ್ಲಾಡಳಿಕ್ಕೂ ಮಾಹಿತಿ ಹೋಗಲಿದೆ. ನೊಂದ ಕುಟುಂಬಕ್ಕೆ ಅಗತ್ಯ ಪರಿಹಾರ ಸಿಗಲಿದೆ ಎಂದರು.
ಮೂರು ದಿನಗಳ ಹಿಂದೆ ಸುರಿದ ಧಾರಕಾರ ಮಳೆಗೆ ಬೃಹತ್ ಮರವೊಂದು ಮನೆಯ ಮಲೆ ಬಿದ್ದು ಮನೆಯ ಒಂದು ಭಾಗವನ್ನು ಸಂಪೂರ್ಣ ಹಾನಿ ಮಾಡಿದೆ. ಮೇಲ್ಛಾವಣಿ ಕುಸಿದಿದ್ದು ಮಾತ್ರವಲ್ಲದೇ ಗೋಡೆಗಳು ಬಿರುಕುಬಿಟ್ಟಿವೆ. ಇಡೀ ಮನೆಯ ಪುನರ್ ನಿರ್ಮಾಣ ಆಗಬೇಕಿದೆ. ಹಾಗೆಯೇ ಮರ ಮನೆ ಮೇಲೆ ಬೀಳುವ ಸಂದರ್ಭದಲ್ಲಿ ಮನೆಯೊಳಗಿದ್ದ ಮೂವರಿಗೂ ಗಂಭೀರ ಗಾಯಗಳಾಗಿವೆ. ಈ ವಿಷಯ ತಿಳಿದ ಕೂಡಲೇ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ನೋಂದ ಕುಟುಂಬದವರೊಂದಿಗೆ ಮಾತನಾಡುವ ಮಾನವೀಯ ಕಾರ್ಯ ನಡೆಸಿದ್ದಾರೆ.
ಈ ವೇಳೆ ಬಿಜೆಪಿ ಪ್ರಮುಖರಾದ ಸುರೇಶ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಕಲ್ ಗೆದ್ದೆ ಜಿಲ್ಲಾ ಪಂಚಾಯತ್ ಸದಸ್ಯರಾದ ರೋಹಿತ್ ಶೆಟ್ಟಿ,ಶ್ರೀಗಣೇಶ ಗಾಣಿಗ ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು

   

Related Articles

error: Content is protected !!